ಮನಸ್ಸನ್ನು ಸದಾ ಆನಂದದಿಂದ ಇಟ್ಟುಕೊಳ್ಳುವುದೇ ಆರೋಗ್ಯದ ಗುಟ್ಟು!
🙏🏼 ಅಮೃತಾತ್ಮರೇ, ನಮಸ್ಕಾರ 🙏🏼 🍁 ಮನಸ್ಸನ್ನು ಸದಾ ಆನಂದದಿಂದ ಇಟ್ಟುಕೊಳ್ಳುವುದೇ ಆರೋಗ್ಯದ ಗುಟ್ಟು! 🍁 ••••••••••••••••••••••••••••••••••••••••••••• ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ ಸಂಚಿಕೆ: 757, ದಿನಾಂಕ: 08.09.2023 ••••••••••••••••••••••••••••••••••••••••••••• ಬೇರೆಯವರ ನಡವಳಿಕೆಗಳಿಗೆ ನಿಮ್ಮ ಮನಸ್ಸನ್ನು ನೋಯಿಸಬೇಡಿ, ಕೊರಗಿಸಬೇಡಿ, ಕುಸಿದುಹೋಗದಿರಿ... ಮನಸ್ಸನ್ನು ಸದಾ ಆನಂದದಿಂದ ಇರಲು ಬಿಡಿ. ಇದೇ ಆರೋಗ್ಯದ ಗುಟ್ಟು! ಇದಕ್ಕಿದ್ದಂತೆ, ಒಂದು ಹಾವು ನಮ್ಮ ಪಕ್ಕದಲ್ಲಿ ಬಂದರೆ ತಕ್ಷಣ ಎದೆಬಡಿತ ಹೆಚ್ಚುತ್ತದೆ. 🙄 ನಾವು ಕಣ್ಮುಚ್ಚಿ ಕುಳಿತಾಗ 100 ಹಾವುಗಳು ಹರಿದುಹೋದರೂ ಎದೆಬಡಿತ ಏರದು...! ಹಾವು ಹೋದದ್ದರಿಂದ ಹೃದಯಬಡಿತ ಹೆಚ್ಚಿದ್ದಲ್ಲ, ಮನಸ್ಸು ಅದಕ್ಕೆ ಸ್ಪಂದಿಸುವ ಕಾರಣದಿಂದಾಗಿ ಅದು ಹೆಚ್ಚಾಯ್ತು. 🤔 ಸರಿಸುಮಾರು ನಿಮಿಷಕ್ಕೆ 72 ಇರಬೇಕಾದ ಹೃದಯದ ಬಡಿತ, 150 ರವರೆಗೆ ಹೆಚ್ಚುವುದನ್ನು ನೋಡಿದ್ದೇವೆ... ಇದು ಆದದ್ದು ಹೇಗೆಂದು ನೋಡೋಣ: ಮನಸ್ಸು ಆತಂಕಗೊಂಡಾಗ, ಕೋಪಗೊಂಡಾಗ, ಭಯಗೊಂಡಾಗ ಕ್ಷಣಮಾತ್ರದಲ್ಲಿ ಅಡ್ರಿನ್ಯಾಲಿನ್ ಹಾರ್ಮೋನು ವೇಗದಿಂದ ಸ್ರವಿಸುತ್ತದೆ. ತಕ್ಷಣ ಇಡೀ ಶರೀರದ ಮಾಂಸಖಂಡಗಳಿಗೆ ವಿಶೇಷ ಬಲ ಬರುತ್ತದೆ, ಶರೀರದಂತೆ ಹೃದಯದ ಮಾಂಸಖಂಡಗಳೂ ಸಂಕೋಚಗೊಳ್ಳುವ ಕಾರಣ ಹೃದಯದ ಬಡಿತ ಏರುತ್ತದೆ. ಈ ಏರುವಿಕೆಯ ತೀವ್ರತೆ ವ್ಯಕ್ತಿಯ ಮನಸ್ಸಿನ ಸ