ಮಕ್ಕಳ ದೃಷ್ಟಿ ದೋಷ ಭಾಗ-2

👀   ಮಕ್ಕಳ ದೃಷ್ಟಿದೋಷ  ಭಾಗ-2 👀
••••••••••••••••••••••••••••••••••••••••••••••
ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ
  ಸಂಚಿಕೆ: 736
ದಿನಾಂಕ:  14.05.2023
••••••••••••••••••••••••••••••••••••••••••••••
ಚಕ್ಷುರೇಂದ್ರಿಯಕ್ಕೆ ಕಫದ ತಂಪಾದ ಶಕ್ತಿ, ಒಳಿತನ್ನು ತರದೇ ಕೇಡನ್ನು ತರುತ್ತದೆ... 🤔

  ನೇತ್ರಗೋಲಕದ ಒಳಗಿರುವ ನೇತ್ರದ್ರವವು ಕೇವಲ ಜಲವಲ್ಲ, ಅದೊಂದು ಶಕ್ತಿಯನ್ನು ಹಿಡಿದಿಡುವ ಅಸಾಧಾರಣ ಸಾಮರ್ಥ್ಯವುಳ್ಳ "ತೇಜೋದ್ರವ". ಇದು ಹೊರಭಾಗದ ನೇತ್ರಮಸೂರವನ್ನೂ ಮತ್ತು ಒಳಭಾಗದ ರೆಟಿನಾ ಎಂಬ ದೃಷ್ಟಿಮಂಡಲವನ್ನೂ ಪೋಷಿಸಿ ನಮಗೆಲ್ಲಾ ದೃಷ್ಟಿದಾನ ಮಾಡುತ್ತಿದೆ.

  ಇಂತಹ ತೇಜೋದ್ರವವನ್ನು ಇಂದಿನ ಆಹಾರಾದಿಗಳಿಂದ ಹಾನಿ ಮಾಡಿಕೊಂಡಿದ್ದೇವೆ... 🤓

  ಈ ಹಾನಿಯು, ವಯಸ್ಸಾದಂತೆ ಉಲ್ಬಣಗೊಳ್ಳುತ್ತದೆ ಮತ್ತು ನೇತ್ರಕಾಚ ಅಥವಾ ಲಿಂಗನಾಶ ಎಂಬ ಕಷ್ಟಸಾಧ್ಯ ಅಥವಾ ಅಸಾಧ್ಯ ರೋಗವನ್ನು ತರುತ್ತದೆ.

  ಈ ತೇಜಸ್ಸು ಹಾಳಾದರೆ ಮನುಕುಲ ಕತ್ತಲಿನಲ್ಲಿ ಕುಳಿತುಕೊಳ್ಳುತ್ತದೆ...

  ಕಫದಿಂದ, ಶೀತ, ಗುರು ಗುಣದಿಂದ ಉಂಟಾಗುವ 'ಅಭಿಷ್ಯಂದ್ಯ' ಎಂಬ ರೋಗವು ಸರ್ವಸ್ಥಾನಗತ ನೇತ್ರರೋಗವಾಗಿದ್ದು, ಅದು ಸ್ವಲ್ಪ ಉಲ್ಬಣಗೊಂಡರೂ...

  'ನೇತ್ರಕಾಚ' ಎಂಬ ಕೇವಲ ಬೆಳಕನ್ನು ಮಾತ್ರ ಗ್ರಹಿಸಲು ಸಾಧ್ಯವಾಗುವ ಮತ್ತು ಇನ್ನಿತರ ವಸ್ತುಗಳನ್ನು ಗ್ರಹಿಸಲು ಅಸಾಧ್ಯವಾದ ರೋಗವನ್ನು ತರುತ್ತದೆ.

  ಹಾಗೆಯೇ ಮುಂದುವರಿದರೆ...

  'ಲಿಂಗನಾಶ' ಎಂಬ ಶಾಶ್ವತ ದೃಷ್ಟಿನಾಶ ಎಂಬ ದಾರುಣ ರೋಗಕ್ಕೆ ಎರವಾಗುತ್ತದೆ.

  ಹಾಗಾಗಿ ನೇತ್ರದ ಸಾಮರ್ಥ್ಯವನ್ನು ಕುಗ್ಗಿಸಿ ದೃಷ್ಟಿಯನ್ನೇ ತೆಗೆಯುವ ಕಫದ ಬಗ್ಗೆ ಎಚ್ಚರ ಅಗತ್ಯ.

  ನಿಮ್ಮ ಮಕ್ಕಳಲ್ಲಿ ದೃಷ್ಟಿ ದೋಷ ಇದೆಯೇ ಇದನ್ನು ಗಮನಿಸಿ -- 
• ಅವರು ಹೆಚ್ಚು ಮೊಸರು ಸೇವಿಸುವ ರೂಢಿ ಉಳ್ಳವರು.
• ಅವರ ತಾಯಿ ಗರ್ಭಪೂರ್ವ ಅಥವಾ ಗರ್ಭಾವಸ್ಥೆಯಲ್ಲಿ ಹೆಚ್ಚು ಮೊಸರನ್ನು ಸೇವಿಸಿರುತ್ತಾರೆ.
• ಅತಿಯಾದ ಬಾಳೆಹಣ್ಣನ್ನು ಸೇವಿಸಿರುತ್ತಾರೆ.
• ಅತಿಯಾದ ಮಜ್ಜಿಗೆಯನ್ನು ಸೇವಿಸಿರುತ್ತಾರೆ.
• ಅತಿಯಾದ ಸಿಹಿ, ಹುಳಿಯನ್ನು ಸೇವಿಸಿ ನೆಗಡಿಯನ್ನು ತಂದುಕೊಂಡು, ಕ್ರಮೇಣ ನೇತ್ರರೋಗಕ್ಕೆ ತುತ್ತಾಗಿರುತ್ತಾರೆ.

  ನಾವು ನೂರಾರು ರೋಗಿಗಳನ್ನು ನೋಡಿದ್ದೇವೆ, ಇವುಗಳಲ್ಲಿ 'ಮೊಸರು' ಅತ್ಯಂತ ಅಪಾಯಕಾರಿ, ಹಾಗಾಗಿ ನಿಮ್ಮ ಮಕ್ಕಳಿಗೆ ಕನಿಷ್ಟ ಪಕ್ಷ 7 ವರ್ಷಗಳವರೆಗಾದರೂ ಮೊಸರನ್ನು ಕೊಡಬೇಡಿ. 21 ವರ್ಷದವರೆಗೆ ಮೊಸರು ಸೇವನೆ ಅಷ್ಟೊಂದು ಯೋಗ್ಯವಲ್ಲ. ದೊಡ್ಡಕರುಳಿನ ಆರೋಗ್ಯದಾಯಕ ಬ್ಯಾಕ್ಟೀರಿಯಾ ಬೆಳವಣಿಗೆಗೆ ಮೊಸರು ಬೇಕೆಂದು ವಾದ ಮಾಡುವವರು, ಮೊದಲು ಮೊಸರು ತಿಂದ ಮಕ್ಕಳ ಕಣ್ಣಿನ ಆರೋಗ್ಯದ ಬಗ್ಗೆ ಒಂದು ಸಮೀಕ್ಷೆ ಕಾರ್ಯ ಮಾಡಲಿ, ನಂತರ ಚರ್ಚೆ ಮಾಡಬಹುದು. ಮಕ್ಕಳಿಗೆ ದೊಡ್ಡಕರುಳಿನ ಆರೋಗ್ಯದಾಯಕ ಬ್ಯಾಕ್ಟೀರಿಯಾಗಳು ಸ್ವಭಾವತಃ ಚೆನ್ನಾಗಿ ಬೆಳೆದಿರುತ್ತವೆ, ಹಾಗಾಗಿ ಈ ಮೊಸರು ಅನಗತ್ಯ...

  ಇನ್ನು ಮಜ್ಜಿಗೆಯ ವಿಷಯಕ್ಕೆ ಬಂದರೆ, ಶುದ್ಧ ಕೊಬ್ಬಿನಿಂದ ನಮ್ಮ ನೇತ್ರಗೋಲಕ ರಚಿತವಾಗಿದೆ ಮತ್ತು ಮಜ್ಜಿಗೆಯು ಕೊಬ್ಬನ್ನು ಬಹು ಆಳವಾಗಿ ಕರಗಿಸುತ್ತದೆ. ಬೆಳೆವ ಮಕ್ಕಳಿಗೆ ಮಜ್ಜಿಗೆ ಕೊಡುವುದರಿಂದ ಶುದ್ಧ ಸ್ನೇಹದ ಕೊರತೆ ಉಂಟಾಗಿ ನೇತ್ರದ ತೇಜಸ್ಸಿಗೂ, ರಕ್ತದ ಸಾಮರ್ಥ್ಯಕ್ಕೂ ಬಲವಾದ ಪೆಟ್ಟನ್ನು ತರುತ್ತದೆ.

  ಅಧಿಕ ಮೇದಸ್ಸುಳ್ಳ ಜನರಿಗೆ ಮಾತ್ರ ಮಜ್ಜಿಗೆ ಅತ್ಯಂತ ಸೂಕ್ತ ಆಹಾರ ಮತ್ತು ಔಷಧವಾಗಿದೆ.

ಪರಿಹಾರಗಳು:
• ಮರೆತೂ ಸಹ ಮಕ್ಕಳಿಗೆ ಮೊಸರು, ಮಜ್ಜಿಗೆ, ಬಾಳೆಹಣ್ಣನ್ನು ಕೊಡಬೇಡಿ.
• ತಾಯಂದಿರೇ, ನಿಮ್ಮ‌ ಮಗುವಿನ ಕಣ್ಣು ಮತ್ತು ಮೆದುಳು ಚುರುಕಾಗಿರಲು ಗರ್ಭಿಣಿಯಾಗಲು ಯೋಚಿಸಿದಾಗ ಮತ್ತು ಗರ್ಭಧಾರಣೆ ಆದಾಗ ಮೊಸರನ್ನು ಸೇವಿಸಬೇಡಿ.
• ಅತಿಯಾದ ಸಿಹಿ ಒಳ್ಳೆಯದಲ್ಲ.
• 7 ವರ್ಷದ ಒಳಗಿನ ಮಕ್ಕಳಿಗೆ ಹುಳಿ ಸೇವನೆ ನಿಷಿದ್ಧ.
• ಆಯುರ್ವೇದ ವೈದ್ಯರ ಭೇಟಿ.

     🙏🏼  ಧನ್ಯವಾದಗಳು  🙏🏼
••••••••••••••••••••••••••••••••••••••••••••••
  ವಿಶ್ವ ಹೃದಯಾಶೀರ್ವಾದವಂ ಬಯಸಿ
  ~ಡಾ. ಮಲ್ಲಿಕಾರ್ಜುನ ಡಂಬಳ
  ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ; ಶಿವಮೊಗ್ಗ, ದಾವಣಗೆರೆ

ಬ್ಲಾಗ್ ಲಿಂಕ್:
https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು