ಮಧುಮೇಹವನ್ನು ನಿವಾರಿಸಬೇಕು, ಇಲ್ಲವೇ ನಿಜಾರ್ಥದಲ್ಲಿ ನಿಯಂತ್ರಿಸಬೇಕು

 🍁  ಮಧುಮೇಹವನ್ನು ನಿವಾರಿಸಬೇಕು, ಇಲ್ಲವೇ ನಿಜಾರ್ಥದಲ್ಲಿ ನಿಯಂತ್ರಿಸಬೇಕು  🍁

•••••••••••••••••••••••••••••••••••••••••••••

  ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ

  ಸಂಚಿಕೆ: 755, ದಿನಾಂಕ: 04.09.2023

•••••••••••••••••••••••••••••••••••••••••••••

  ಮಧುಮೇಹವನ್ನು ನಿವಾರಿಸಬೇಕು, ಇಲ್ಲವೇ ನಿಜಾರ್ಥದಲ್ಲಿ ನಿಯಂತ್ರಿಸಬೇಕು. ಕೇವಲ ರಕ್ತದ ಸಕ್ಕರೆ ನಿಯಂತ್ರಿಸಿ ಕೊನೆಗೆ ಡಯಾಬಿಟೀಸ್‌ನಿಂದ ಬಂದ ಕಿಡ್ನಿ ಫೇಲ್ಯೂರ್ ಎಂದರೆ ಏನರ್ಥ?!!


  ಡಯಾಬಿಟೀಸ್ ನೆಫ್ರೋಪತಿ ಎಂದರೆ 'ಮಧುಮೇಹದಿಂದ ಆದ ಕಿಡ್ನಿ ತೊಂದರೆ', ಇದಕ್ಕೆ ಡಯಾಲೈಸಿಸ್ ಅಥವಾ ಕಿಡ್ನಿ ಕಸಿಯಂತಹ ದಾರುಣ ಸ್ಥತಿ ಮತ್ತು ಅಕಾಲಿಕ ಮರಣ ಬರಬಹುದು. 🤔


  ಡಯಾಬಿಟೀಸ್ ರೆಟಿನೋಪತಿ ಎಂದರೆ 'ಮಧುಮೇಹದಿಂದ ಆದ ಕಣ್ಣಿನ ರೆಟಿನಾ ತೊಂದರೆ', ಇದರಿಂದ ಕುರುಡುತನ ಬರುತ್ತದೆ. 🤔


  ಡಯಾಬಿಟೀಸ್ ಕಾರ್ಡಿಯೋಪತಿ ಎಂದರೆ 'ಮಧುಮೇಹದಿಂದ ಆದ ಹೃದ್ರೋಗ', ಇದರಿಂದ ಬಹುದೊಡ್ಡ ಶಸ್ತ್ರಚಿಕಿತ್ಸೆ ಅಥವಾ ಹೃದಯಾಘಾತದಿಂದ ತಕ್ಷಣ ಪ್ರಾಣಾಘಾತಕ ಸಾಧ್ಯತೆ ಹೆಚ್ಚು..‌. 🤭


  ಡಯಾಬಿಟೀಸ್ ನ್ಯೂರೋಪತಿ ಎಂದರೆ 'ಮಧುಮೇಹದಿಂದ ಆದ ನರಗಳ ತೊಂದರೆ', ಇದರಿಂದ ಮೆದುಳು ಮತ್ತು ನರಮಂಡಲ ಶಕ್ತಿಹೀನವಾಗಿ ಜೀವನ ನಿಸ್ತೇಜವಾಗುತ್ತದೆ. 🙄


  ಅಂದರೆ, ಮಧುಮೇಹವನ್ನು ನಿಜಾರ್ಥದಲ್ಲಿ ನಿಯಂತ್ರಿಸದೇ, ಕೆಟ್ಟ ಪದ್ಧತಿಯಾದ ಕೇವಲ ರಕ್ತದ ಸಕ್ಕರೆ ನಿಯಂತ್ರಣ ಔಷಧಿಗಳಿಂದ ಮಧುಮೇಹವನ್ನು ಬೆಳೆಸುತ್ತಾ, ಬೆಳೆಸುತ್ತಾ ಅತ್ಯಂತ ದಾರುಣ ರೋಗಗಳಿಗೆ ತಳ್ಳುತ್ತಿರುವುದು ವೈದ್ಯಕೀಯ ಲೋಕ ನಾಚಬೇಕಾದ ಸಂಗತಿ.


  ಇಷ್ಟೆಲ್ಲಾ ಕಷ್ಟದಿಂದ, ಖರ್ಚಿನಿಂದ ನಿಯಂತ್ರಿಸಿದರೂ ರೋಗಿಯನ್ನು ಇಷ್ಟು ದಾರುಣ ಸ್ಥಿತಿಗೆ ತಳ್ಳುತ್ತಿರುವ ಮಧುಮೇಹವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಅದರೊಂದಿಗೆ ಕುಸ್ತಿ ಆಡುತ್ತಿದೆ ವೈದ್ಯ ವಿಜ್ಞಾನ!!


  ಪರಿಣಾಮರೂಪದಲ್ಲಿ ರೋಗಿ ಅತ್ಯಂತ ಕೆಟ್ಟ ರೋಗಗಳಿಗೆ ತುತ್ತಾಗುತ್ತಿದ್ದಾನೆ...


  ಸಂಕ್ಲೇದ ಎಂಬ ದೂಷಿತ ಕೊಬ್ಬಿನ ಅಂಶದ ವಿಷವು ರಕ್ತದ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ, ಇದು ವಾಸ್ತವಾಂಶ.


  ಇದು ವೈದ್ಯಜಗತ್ತಿಗೆ ತಿಳಿಯದ ಕಾರಣ, ಕೇವಲ ರಕ್ತದ ಸಕ್ಕರೆ ನಿಯಂತ್ರಿಸಿ, ದುಷ್ಟ ವಿಷವನ್ನು ರೋಗಿಯ ರಕ್ತದಲ್ಲಿ ಹಾಗೆಯೇ ಇಟ್ಟುಕೊಳ್ಳುತ್ತದೆ ವೈದ್ಯಲೋಕ, ಇದರಿಂದ ರೋಗಿ ಅಪಾಯಗಳಿಗೆ ತುತ್ತಾಗುತ್ತಿದ್ದಾನೆ‌.


  ಆಯುರ್ವೇದವು -- ಸಕ್ಕರೆಗಿಂತ ವಿಷ ನಿರ್ಮೂಲನೆ ಮಾಡಲು ಡಿ-ಟಾಕ್ಸ್ ಪದ್ಧತಿಯಾದ ಪಂಚಕರ್ಮಗಳಿಂದ ವಿಷನಿವಾರಣೆ ಮಾಡುತ್ತದೆ ಮತ್ತು ವಿಷ ಸಂಚಯವಾಗುವ ಎಲ್ಲ ದ್ವಾರಗಳನ್ನೂ ಸಹ ಪಥ್ಯೆ ಎಂಬ ಕೀಲಿಕೈ ಹಾಕಿ ಭದ್ರಗೊಳಿಸುವ ಕಾರಣ ವಿಷೋತ್ಪತ್ತಿ ನಿಂತುಹೋಗುತ್ತದೆ. ಇದರಿಂದ ಕಣ್ಣು, ಕಿಡ್ನಿ, ಹೃದಯ, ಮೆದುಳು-ನರಗಳು ಅತ್ಯಂತ ಸುರಕ್ಷಿತ...


     ಧನ್ಯವಾದಗಳು

•••••••••••••••••••••••••••••••••••••••••••••

  'ಆಸ್ಪತ್ರೆ‌ ರಹಿತ‌ ಜೀವನ' ಗುಂಪಿನ ಹಿಂದಿನ 700+ ಸಂಚಿಕೆಗಳು ಟೆಲಿಗ್ರಾಂ ಆ್ಯಪ್‌ನಲ್ಲಿ ಮಾತ್ರ ಕಾಣಸಿಗುತ್ತವೆ.


  ಆಸಕ್ತರು ಲಿಂಕ್ ಬಳಸಿ ಟೆಲಿಗ್ರಾಂ ಗುಂಪಿಗೆ ಸೇರಬಹುದು:

https://t.me/hospitalfreelife_kan


        🙏🏼  ಧನ್ಯವಾದಗಳು  🙏🏼

•••••••••••••••••••••••••••••••••••••••••••••

  ವಿಶ್ವ ಹೃದಯಾಶೀರ್ವಾದವಂ ಬಯಸಿ

  ~ಡಾ. ಮಲ್ಲಿಕಾರ್ಜುನ ಡಂಬಳ

  ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ; ಶಿವಮೊಗ್ಗ, ದಾವಣಗೆರೆ


ಬ್ಲಾಗ್ ಲಿಂಕ್:

https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು