ವೈರಸ್, ಬ್ಯಾಕ್ಟೀರಿಯಾಗಳಿಗೆ ಊಟ ಸಿಗದಂತೆ ಮಾಡಿದರೆ ಅವು ನಮ್ಮ ಶರೀರವನ್ನು ಪ್ರವೇಶಿಸಲಾರವು

 🙏🏼   ಅಮೃತಾತ್ಮರೇ ನಮಸ್ಕಾರ   🙏🏼


  🍁 ವೈರಸ್, ಬ್ಯಾಕ್ಟೀರಿಯಾಗಳಿಗೆ ಊಟ ಸಿಗದಂತೆ ಇದ್ದರೆ ಅವು ನಮ್ಮ ಶರೀರವನ್ನು ಪ್ರವೇಶಿಸಲಾರವು. ಆಗ ರೋಗದ ಮಾತೆಲ್ಲಿದೆ! 🍁

•••••••••••••••••••••••••••••••••••••••••••••

  ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ

  ಸಂಚಿಕೆ: 750, ದಿನಾಂಕ: 30.08.2023

•••••••••••••••••••••••••••••••••••••••••••••

  ಬೆಲ್ಲವನ್ನು ತೆರೆದಿಟ್ಟಿದ್ದರೆ ಬೇಡವೆಂದರೂ, ಓಡಿಸಿದರೂ ಮತ್ತೆ ಮತ್ತೆ ನೊಣಗಳೂ, ಇರುವೆಗಳೂ ಮುತ್ತೇ ಮುತ್ತುತ್ತವೆ. ಅದನ್ನೇ ಡಬ್ಬಲ್ಲಿ ಮುಚ್ಚಿಟ್ಟರೆ, ಆಮಂತ್ರಣ ಕೊಟ್ಟರೂ ಇರುವೆಗಳು ಬರಲಾರವು.


  ಹಾಗೆಯೇ, ನಮ್ಮ ಶರೀರದೊಳಗೆ ವೈರಸ್, ಬ್ಯಾಕ್ಟೀರಿಯಾಗಳಿಗೆ ಊಟ ಸಿಗದಂತೆ ಮಾಡಿದರೆ, ಅವು ಯಾವ ಕಾರಣಕ್ಕೂ ನಮ್ಮ ಶರೀರವನ್ನು ಪ್ರವೇಶಿಸಲಾರವು ಮತ್ತು ಬಾಧಿಸಲಾರವು, ಆಗ ರೋಗದ ಮಾತೆಲ್ಲಿದೆ?! 


  ಯಾವುದೇ ರೋಗಾಣುಗಳು ನಮ್ಮೊಳಗೆ ನುಗ್ಗಬೇಕೆಂದರೆ, ನಮ್ಮ ಶರೀರದೊಳಗೆ ಅವುಗಳಿಗೆ ನೆಲೆಯೂರುವ ವಾತಾವರಣ ಇದೆ ಎಂದೂ, ಬೆಳವಣಿಗೆಗೆ, ಅವುಗಳ ಸಂತಾನಕ್ಕೆ ಬೇಕಾದ ಆಹಾರ ಇದೆ ಎಂದು ಬಹು ದೂರದಿಂದಲೇ ಅವು ಸ್ಪಷ್ಟವಾಗಿ ಗುರುತಿಸುತ್ತವೆ! ಬೆಲ್ಲ ತೆರೆದಿಟ್ಟರೆ ದೂರದ ಇರುವೆ ಗೂಡಿನಲ್ಲಿರುವ ಆ ಪುಟ್ಟ ಇರುವೆ ಅದೆಷ್ಟು ನಿಖರವಾಗಿ ಗುರುತಿಸುವುದಷ್ಟೇ ಅಲ್ಲ, ಅಲ್ಲಿಗೆ ತಾನು ಸುರಕ್ಷಿತವಾಗಿ ತಲುಪುವ ಮಾರ್ಗವನ್ನೂ ಕಂಡುಕೊಳ್ಳುವಂತೆ, ಇರುವೆಗಳಿಗಿಂತಲೂ ಅತ್ಯಂತ ಸೂಕ್ಷ್ಮ ದೇಹಿಗಳಾದ ಬ್ಯಾಕ್ಟೀರಿಯಾ, ನಿರ್ದೇಹಿಯಾದ ವೈರಸ್ಸುಗಳು ಇನ್ನೂ ನಿಖರವಾಗಿ ಮತ್ತು ವೇಗವಾಗಿ ದಾಳಿ ಇಡುತ್ತವೆ. ಇದಾದ ನಂತರವಷ್ಟೇ ಮುಂದೆ ಸೋಂಕು, ಜ್ವರ ಮುಂತಾದ ರೋಗಗಳು ಬರುತ್ತವೆ.


  ಮನುಷ್ಯರಾದ ನಾವು ಗಮನಿಸುವಿಕೆಯನ್ನು ಆಧುನಿಕ ವಿಜ್ಞಾನಕ್ಕೆ ಅಡ ಇಟ್ಟಂತೆ ಬಾಳುತ್ತಿದ್ದೇವೆ. ವಿಜ್ಞಾನ ಸಂಶೋಧನೆ ಮಾಡಿ ಹೇಳಲಿ, ನಿಮ್ಮ ನಿಮ್ಮ ಅನುಭವಗಳೊಂದಿಗೆ ವಿಜ್ಞಾನದ ಮಾತುಗಳನ್ನು ಒರೆಹಚ್ಚಬೇಡವೇ?!!


  ದುರಾದೃಷ್ಟವಶಾತ್ ವೈದ್ಯರೂ ಔಷಧ ಕೊಡುವವರಾಗಿದ್ದಾರೆಯೇ ಹೊರತೂ, ಎಷ್ಟು ಮಾತ್ರೆ ಕೊಟ್ಟರೂ ಮಧುಮೇಹ ಕೆಲ ವರ್ಷಗಳಲ್ಲಿ ಹೊಸ ಮಾತ್ರೆ ಕೇಳಲು ಕಾರಣವೇನು ಎಂದು ಗಮನಿಸುತ್ತಿಲ್ಲ!!! ಇದು ರೋಗಿಗೆ ಬಹಳ ಅನ್ಯಾಯ ಮಾಡಿದಂತೆ ಆಗುತ್ತದೆ...


  ಮಧುಮೇಹ, ಬಿ.ಪಿ., ಥೈರಾಯ್ಡಿಸಮ್ ಮುಂತಾದವು ಯಾವ ಕ್ರಿಮಿಗಳಿಂದಲೂ ಬರುವುದಿಲ್ಲ, ಅಂದರೆ ಏನು ಕಾರಣ ಎಂದು ಮೂಲಕ್ಕೆ ಹೋದ ದಿನ ಮಾತ್ರ ಉತ್ತರ ದೊರಕುತ್ತದೆ.


  ಇಲ್ಲವಾದಲ್ಲಿ "ಆಸ್ಪತ್ರೆಗಳಲ್ಲಿ ಆರೋಗ್ಯ ಸಿಗುವುದಿಲ್ಲ; ಕೇವಲ ಔಷಧಿಗಳು ಸಿಗುತ್ತವೆ."

•••••••••••••••••••••••••••••••••••••••••••••

  ಆಹಾರ ವಿಹಾರ ಸರಿಪಡಿಸಿಕೊಳ್ಳೋಣ, ಆರೋಗ್ಯದಿಂದ ಇರೋಣ

•••••••••••••••••••••••••••••••••••••••••••••

  'ಆಸ್ಪತ್ರೆ‌ ರಹಿತ‌ ಜೀವನ' ಗುಂಪಿನ ಹಿಂದಿನ 700+ ಸಂಚಿಕೆಗಳು ಟೆಲಿಗ್ರಾಂ ಆ್ಯಪ್‌ನಲ್ಲಿ ಮಾತ್ರ ಕಾಣಸಿಗುತ್ತವೆ.


  ಆಸಕ್ತರು ಲಿಂಕ್ ಬಳಸಿ ಟೆಲಿಗ್ರಾಂ ಗುಂಪಿಗೆ ಸೇರಬಹುದು:

https://t.me/hospitalfreelife_kan


        🙏🏼  ಧನ್ಯವಾದಗಳು  🙏🏼

•••••••••••••••••••••••••••••••••••••••••••••

  ವಿಶ್ವ ಹೃದಯಾಶೀರ್ವಾದವಂ ಬಯಸಿ

  ~ಡಾ. ಮಲ್ಲಿಕಾರ್ಜುನ ಡಂಬಳ

  ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ, ಶಿವಮೊಗ್ಗ, ದಾವಣಗೆರೆ


ಬ್ಲಾಗ್ ಲಿಂಕ್:

https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು