ಮಧುಮೇಹ ಅನುವಂಶೀಯವೆಂಬ ಚರ್ಚೆ ಬೇಡ; ಮುಂದಿನ ಪೀಳಿಗೆಗೆ ವರ್ಗಾಯಿಸದಂತೆ ಎಚ್ಚರಿಸೋಣ

 🍁  ಮಧುಮೇಹ ಅನುವಂಶೀಯವೆಂಬ ಚರ್ಚೆ ಬೇಡ; ಮುಂದಿನ ಪೀಳಿಗೆಗೆ ವರ್ಗಾಯಿಸದಂತೆ ಎಚ್ಚರಿಸೋಣ  🍁

•••••••••••••••••••••••••••••••••••••••••••••

  ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ

  ಸಂಚಿಕೆ: 754, ದಿನಾಂಕ: 03.09.2023

•••••••••••••••••••••••••••••••••••••••••••••

  ಮಧುಮೇಹ ಅನುವಂಶೀಯವೋ ಅಲ್ಲವೋ ಚರ್ಚೆ ಅನಗತ್ಯ; ಮುಂದಿನ ಪೀಳಿಗೆಗೆ ವರ್ಗಾಯಿಸದಂತೆ ಮಾಡಬಹುದಾದ ಉಪಾಯಗಳನ್ನು ನೋಡೋಣ...


  ಎಲ್ಲಾ ಅನುವಂಶೀಯ ರೋಗಗಳು ಮಧುಮೇಹದಂತೆ ದೈತ್ಯಾಕಾರವಾಗಿ ಹಬ್ಬುತ್ತಿಲ್ಲವಲ್ಲ, ಇದೇಕೆ ಹೀಗೆ ಎಂಬ ಯೋಚನೆ ನಿಮಗೆ ಬಂದರೆ...


  ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸದೇ ಇರುವ ಬಗ್ಗೆ ಗಮನ ಕೊಡುತ್ತೀರಿ...


  ಮಕ್ಕಳ ಆಹಾರ-ವಿಹಾರಗಳಲ್ಲಿ ಈ ಕೆಳಗಿನ ಎಚ್ಚರಿಕೆಗಳು ಅತ್ಯಗತ್ಯ...


• ಆಹಾರದ ಹೆಸರಿನಲ್ಲಿ ಎಲ್ಲಾ ರೀತಿಯ ಕೃತಕ ತಿನಿಸುಗಳಾದ ಜಂಕ್ ಫುಡ್‌ಗಳು, ಮೈದಾ ಪದಾರ್ಥಗಳು ಪ್ಯಾಂಕ್ರಿಯಾಸ್ ಅನ್ನು ಅತ್ಯಂತ ಒತ್ತಡಕ್ಕೆ ನೂಕುತ್ತಿವೆ, ಹಾಗಾಗಿ ಸಂಪೂರ್ಣ ನಿಲ್ಲಿಸುವುದು ಅತ್ಯಂತ ಸೂಕ್ತ ಮತ್ತು ಅನಿವಾರ್ಯ. 🤔


• ಕರಿದ ತಿಂಡಿಗಳು, ಮೇಲೆ ಎಣ್ಣೆ ಕಲಸಿದ ತಿಂಡಿಗಳೂ ಸಹ ಪ್ಯಾಂಕ್ರಿಯಾಸ್‌ಗೆ ಬಲವಾದ ಒತ್ತಡ ಹೇರುತ್ತವೆ, ಇವುಗಳನ್ನು ನಿಲ್ಲಿಸುವುದು ಸೂಕ್ತ, ಇಂದಿನ ಕಾಲಘಟ್ಟದಲ್ಲಿ ಕಷ್ಟ ಎನ್ನುವವರು ಹಬ್ಬಗಳಲ್ಲಿ ಮನೆಯಲ್ಲಿ ಮಾಡುವ ಕರಿದ ಪದಾರ್ಥಗಳನ್ನು ಅತ್ಯಲ್ಪ ಪ್ರಮಾಣದಲ್ಲಿ ಸೇವಿಸಬಹುದು. ಆದರೆ ರೂಢಿ ಮಾಡಿಕೊಂಡರೆ ಮಧುಮೇಹದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. 🤭


  ಯಾವುದೋ ಒಂದು ವಿಷಯದ ಮೇಲೆ ಪೋಷಕರಾಗಲೀ, ಸ್ನೇಹಿತರಾಗಲೀ, ಶಾಲೆಯಲ್ಲಾಗಲೀ ಒಂದು ಹಂತದವರೆಗೆ ಮಾತ್ರ ಒತ್ತಡ ಕೊಡಿ, ನಂತರ ನಿಮ್ಮ ಮಕ್ಕಳ ಮನೋ-ಬೌದ್ಧಿಕ ಸಾಮರ್ಥ್ಯವನ್ನು ಸರಿಯಾಗಿ ಗುರುತಿಸಿಕೊಂಡು ತಕ್ಕಷ್ಟೇ ಒತ್ತಡದಿಂದ ಅವರ‌ ವಿದ್ಯಾರ್ಥಿ ಜೀವನ ನಿರ್ವಹಿಸಿರಿ.


  12 ವರ್ಷದ ಒಳಗಿನ ಮಕ್ಕಳನ್ನು ಕಡ್ಡಾಯವಾಗಿ ರಾತ್ರಿ 9ರ ಒಳಗೆ ನಿದ್ದೆಗೆ ಕಳಿಸಿರಿ.


  ಮಕ್ಕಳ ಓದಿಗೆಷ್ಟು ಮಹತ್ವವೋ ಅದಕ್ಕಿಂತಲೂ ಹೆಚ್ಚು ಅವರ ಶಾರೀರಿಕ ಶ್ರಮಕ್ಕೆ ಮಹತ್ವ ಕೊಡಿ.


  ರಾಸಾಯನಿಕ ಗೊಬ್ಬರ ಹಾಕಿ ಬೆಳೆದ, ಕೀಟನಾಶಕ ಸಿಂಪಡಿಸಿ ಬೆಳೆದ ಧಾನ್ಯಗಳಿಂದ ತಯಾರಾದ ಆಹಾರಗಳನ್ನು ಕೊಡಬೇಡಿ, ನೀವೂ ಸಹ ಸೇವಿಸಬೇಡಿ. ಈ ವಿಷ ಪ್ಯಾಂಕ್ರಿಯಾಸ್ ಅನ್ನು ಕೆಡಿಸುತ್ತದೆ, ಎಚ್ಚರ. ನೈಸರ್ಗಿಕ ರೀತಿಯಲ್ಲಿ ಶುದ್ಧವಾಗಿ ಬೆಳೆದ ಆಹಾರಗಳನ್ನಷ್ಟೇ ಮಕ್ಕಳಿಗೆ ಕೊಡಿ ಮತ್ತು ನೀವೂ ಸೇವಿಸಿರಿ...


  ಮನಸ್ಸನ್ನು ಅತಿಯಾದ ತವಕದಿಂದ, ಆಸೆಯಿಂದ ಹಿಂದೆ ತೆಗೆದು ಸಮಾಧಾನವಾಗಿ ಹೆಜ್ಜೆ ಹಾಕುವುದನ್ನು ಪೋಷಕರು ಮಾಡುವುದರಿಂದ ಮಕ್ಕಳು ಆತಂಕರಹಿತರಾಗುತ್ತಾರೆ. ಈ ಆತಂಕರಹಿತ ಸ್ಥಿತಿ ಮಧುಮೇಹವನ್ನು ಮುಂದಿನ ಪೀಳಿಗೆಗೆ ಹೋಗದಂತೆ ತಡೆಯುತ್ತದೆ! 🤔


  12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕಡ್ಡಾಯವಾಗಿ ಆಯುರ್ವೇದ ಪದ್ಧತಿಯಿಂದ ಶರೀರವನ್ನು ಶುದ್ಧೀಕರಣಗೊಳಿಸುವ ಪಂಚಕರ್ಮಗಳನ್ನು ಪ್ರತಿ ವರ್ಷ ಮಾಡಿಸುವುದು. ಅನುವಂಶೀಯತೆಯನ್ನು ತಡೆಯಲು ಇದು ಅತ್ಯಂತ ಮಹತ್ವದ ಚಿಕಿತ್ಸಾ ಪದ್ಧತಿಯಾಗಿದೆ.


     ಧನ್ಯವಾದಗಳು

•••••••••••••••••••••••••••••••••••••••••••••

  'ಆಸ್ಪತ್ರೆ‌ ರಹಿತ‌ ಜೀವನ' ಗುಂಪಿನ ಹಿಂದಿನ 700+ ಸಂಚಿಕೆಗಳು ಟೆಲಿಗ್ರಾಂ ಆ್ಯಪ್‌ನಲ್ಲಿ ಮಾತ್ರ ಕಾಣಸಿಗುತ್ತವೆ.


  ಆಸಕ್ತರು ಲಿಂಕ್ ಬಳಸಿ ಟೆಲಿಗ್ರಾಂ ಗುಂಪಿಗೆ ಸೇರಬಹುದು:

https://t.me/hospitalfreelife_kan


        🙏🏼  ಧನ್ಯವಾದಗಳು  🙏🏼

•••••••••••••••••••••••••••••••••••••••••••••

  ವಿಶ್ವ ಹೃದಯಾಶೀರ್ವಾದವಂ ಬಯಸಿ

  ~ಡಾ. ಮಲ್ಲಿಕಾರ್ಜುನ ಡಂಬಳ

  ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ; ಶಿವಮೊಗ್ಗ, ದಾವಣಗೆರೆ


ಬ್ಲಾಗ್ ಲಿಂಕ್:

https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು