ಮೆದುಳಿನ ಜೀವಕೋಶಗಳಿಗೆ ಬಾಧಕ ತರುವ ಜೀವನಶೈಲಿ -ಭಾಗ-2 😶🙄ಬುದ್ಧಿಮಾಂದ್ಯತೆ🙄😶

🍁 ಮೆದುಳಿನ ಜೀವಕೋಶಗಳಿಗೆ ಬಾಧಕ ತರುವ ಜೀವನಶೈಲಿ -- {ಭಾಗ-2} 'ಬುದ್ಧಿಮಾಂದ್ಯತೆ ' 🍁
••••••••••••••••••••••••••••••••••••••••••
  ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ 
  ಸಂಚಿಕೆ: 740
ದಿನಾಂಕ: 28.05.2023
••••••••••••••••••••••••••••••••••••••••••
  ನಮ್ಮ ಚಟುವಟಿಕೆಗಳನ್ನು ಸದೃಢ ಮತ್ತು ಸುನಿಯಂತ್ರಿತವಾಗಿ ಇಡುವಲ್ಲಿ ನರಗಳ ಕೋಶಪೊರೆ ಮತ್ತು ನರತಂತುಗಳ ಪೊರೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ.

• ಬುದ್ಧಿಮಾಂದ್ಯತೆಯಲ್ಲಿ ವಿಕೃತ ಸ್ಪಂದನೆಯನ್ನು ನೋಡುತ್ತೇವೆ!
• ಪಾರ್ಕಿನ್ಸನ್ ಕಾಯಿಲೆ ಬಂದವರಲ್ಲಿ ಅತ್ಯಂತ ನಿಧಾನ ಗತಿಯ ಸ್ಪಂದನೆ ನೋಡುತ್ತೇವೆ!!
• ಸ್ಕಿಜೋಫ್ರೀನಿಯಾ (schizophrenia) ಕಾಯಿಲೆಯಲ್ಲಿ ತೀವ್ರಗತಿಯ, ಅನಿಯಂತ್ರಿತ ಸ್ಪಂದನೆಯನ್ನು ನೋಡುತ್ತೇವೆ!!!

  ಮೂರೂ ಸಂದರ್ಭಗಳಲ್ಲಿ ಕೋಶಪೊರೆ ಮತ್ತು ನರತಂತುಗಳ ಪೊರೆಯಾದ ಡೊಪಮೈನ್ ಗಳಲ್ಲಿ ವಿಕೃತಿ ಕಂಡುಬರುತ್ತದೆ.
••••••••••••••••••••••••••••••••••••••••••••••
  ಇವುಗಳಿಗೆ ಕಾರಣ ಮತ್ತು ಪರಿಹಾರಗಳನ್ನು ನೋಡೋಣ...

  ನಮ್ಮ ಶರೀರ, ಮನಸ್ಸಿನ ಆಲೋಚನೆಗಳ ಆಣತಿಯಂತೆ ಮೆದುಳಿನಲ್ಲಿ ವಿಶಿಷ್ಠವಾದ ಮತ್ತು ಸೂಕ್ತ ಗುರಿಯನ್ನು ಹೊಂದಿರುವ ವಿದ್ಯುತ್ ತರಂಗಗಳು ಉತ್ಪತ್ತಿಯಾಗುತ್ತವೆ (ಇದು ಆಧುನಿಕ ವೈದ್ಯಪದ್ಧತಿಗೆ ಇನ್ನೂ ನಿಲುಕಿಲ್ಲ, ಮೆದುಳೇ ಸ್ವತಃ ಸೃಜಿಸುತ್ತದೆ ಅಥವಾ ಮನಸ್ಸು ಮೆದುಳಿನ ಆರೋಗ್ಯದ ಮೇಲೆ ಅವಲಂಬಿತವಾಗಿದೆ ಎಂದು ಅದು ಭಾವಿಸಿದೆ, ಹಾಗಾಗಿ ಚಿಕಿತ್ಸೆಯೂ ಅದೇ ರೀತಿಯಾಗಿದೆ).

  ಹೀಗೆ ಉಂಟಾದ ತರಂಗಗಳು ಮೆದುಳು ಮತ್ತು ನರತಂತುಗಳ ಮುಖಾಂತರ ಶರೀರಕ್ಕೆ ಹರಿದು ಸೂಕ್ತವಾದ ಕ್ರಿಯೆಯನ್ನು ಮಾಡುತ್ತಿರುತ್ತವೆ.

  ನಮ್ಮ ಮನಸ್ಸು ಜನ್ಮಾಂತರ ಸಂಸ್ಕಾರಗಳ ವಶಾತ್ ನಿರ್ದಿಷ್ಟ ಆಲೋಚನೆಗಳನ್ನು ನಿರಂತರ ಸೃಜಿಸುತ್ತಿರುತ್ತದೆ.

  ಮನಸ್ಸಿನ ಆಣತಿಯನ್ನು ಪಾಲಿಸುವಷ್ಟು, ನಿಯಂತ್ರಣ ಇಟ್ಟುಕೊಳ್ಳುವಷ್ಟು ಸಶಕ್ತ ನರಮಂಡಲ ಇದ್ದಲ್ಲಿ ಎಲ್ಲಾ ಸರಿಯಾಗಿರುತ್ತದೆ. 🤔
••••••••••••••••••••••••••••••••••••••••••••••
ಬುದ್ಧಿಮಾಂದ್ಯತೆ:

  ಈ ನರಮಂಡಲದ ಕೋಶಪೊರೆ ಅಶಕ್ತವಾಗಿದ್ದಲ್ಲಿ ಮನಸ್ಸಿನ ಆಣತಿಯನ್ನು ಯಥಾವತ್ತಾಗಿ ಗ್ರಹಿಸದೇ ವಿಕೃತ ಕ್ರಿಯೆಯನ್ನು ಹೊರಹಾಕುತ್ತದೆ. ಇದು ಸ್ಪಷ್ಟವಾಗಿ ಮೆದುಳಿನ ಅಪೂರ್ಣ ಬೆಳವಣಿಗೆ ಅಥವಾ ವಿಕೃತ ಬೆಳವಣಿಗೆ. 'ಬುದ್ಧಿಮಾಂದ್ಯತೆ ' ಎಂದು ಇದನ್ನು ಕರೆಯುತ್ತೇವೆ.

ಕಾರಣಗಳೇನು?:
  ತಂದೆ-ತಾಯಿ ಆಗಬಯಸುವ ಸ್ತ್ರೀ-ಪುರುಷರು ತಮ್ಮ ಅನಿಯಂತ್ರಿತ ಜೀವನಶೈಲಿಯ ಪ್ರಭಾವಕ್ಕೆ ಒಳಗಾಗಿ, ಹಿಂದಿನ ದಿನದ ಆಹಾರ ಸೇವನೆ, ಆಹಾರವಲ್ಲದ ಆಹಾರ ಸೇವನೆ(ಜಂಕ್), ಅಕಾಲ ನಿದ್ದೆ, ಅತಿಯಾದ ನಿದ್ದೆ, ತಡರಾತ್ರಿ ನಿದ್ದೆ, ತೀಕ್ಷ್ಣ ಪ್ರಚೋದಕ ಆಹಾರಗಳಾದ ಚಹಾ, ಕಾಫಿ, ತಂಬಾಕು(ಸಿಗರೇಟು ಮತ್ತು ಗುಟ್ಕಾ), ತೀಕ್ಷ್ಣ ಮಸಾಲೆಗಳ ಸೇವನೆ, ದೋಸೆ-ಇಡ್ಲಿಗಳ ನಿರಂತರ ಸೇವನೆ (ದೋಸೆ-ಇಡ್ಲಿಗಳ ಹಿಟ್ಟನ್ನು ಫ್ರಿಜ್‌ನಲ್ಲಿ ವಾರಗಟ್ಟಲೆ ಇಟ್ಟು ಸೇವಿಸುವವರು ಅತ್ಯಂತ ಹೆಚ್ಚು ಬಾಧೆಗೆ ಒಳಗಾಗುತ್ತಾರೆ!)..... ಇವುಗಳಿಂದ ಹೆಣ್ಣಿನ ಅಥವಾ ಗಂಡಿನ ಬೀಜಗಳಲ್ಲಿ ಮೆದುಳನ್ನು ಉತ್ಪತ್ತಿ ಮಾಡುವ ಜೀನ್‌ಗಳ(ವರ್ಣತಂತು) ವಿಕೃತಿ ಉಂಟಾಗುತ್ತದೆ.

  ಇಂತಹ ವೀರ್ಯ, ಅಂಡಗಳು ಸಂಯೋಗಗೊಂಡಲ್ಲಿ ಮೆದುಳಿನ ಜೀವಕೋಶಗಳಲ್ಲಿ ವಿಕೃತಿಯುಂಟಾಗಿ ಬುದ್ಧಿಮಾಂದ್ಯತೆ ಬರುತ್ತದೆ... 🙄

ಮಗು ಜನನಾನಂತರದ ಪರಿಹಾರಗಳು:

• ಮನೆಮದ್ದು ಯಾವುದೇ ಫಲಿತಾಂಶಗಳನ್ನು ಕೊಡುವುದಿಲ್ಲ.
• ವಿಶಿಷ್ಠವಾದ ಔಷಧಿಗಳು, ಪಂಚಕರ್ಮ ಚಿಕಿತ್ಸಾ ಕ್ರಮಗಳು.
• ನಿರ್ದಿಷ್ಟ ಆಹಾರ ಪದ್ಧತಿಗಳು.
• ಅನಿವಾರ್ಯ ಜೀವನಶೈಲಿ ಮಾತ್ರ ಪರಿಣಾಮಕಾರಿ ಫಲಿತಾಂಶ ನೀಡುತ್ತವೆ...

  ಇದರ ತೀವ್ರತೆಯ ಆಧಾರದಲ್ಲಿ ಪೂರ್ಣ ಗುಣಪಡಿಸಬಹುದು ಅಥವಾ ಅರ್ಧ ಗುಣಪಡಿಸಬಹುದು ಅಥವಾ ಸ್ವಲ್ಪಾಂಶ ಗುಣಪಡಿಸಬಹುದು. ಇದು ಆಯುರ್ವೇದ ಚಿಕಿತ್ಸಾ ವಿಧಾನಗಳಿಂದ ಮಾತ್ರ ಸಾಧ್ಯ.
••••••••••••••••••••••••••••••••••••••••••••••
ಶಾಶ್ವತ ಪರಿಹಾರ:
  ಗಂಡು-ಹೆಣ್ಣು 'ಚೈತನ್ಯ ಗರ್ಭ ಸಂಸ್ಕಾರ' ತರಬೇತಿಯಂತೆ ತಮ್ಮ-ತಮ್ಮ ಬೀಜಗಳನ್ನು ಸಶಕ್ತಗೊಳಿಸುವುದು ಈ ಕಾಯಿಲೆಯ ಶಾಶ್ವತ ಪರಿಹಾರ. ''ಚೈತನ್ಯ ಗರ್ಭ ಸಂಸ್ಕಾರ'' ಕೇವಲ ಮೆದುಳು ಮಾತ್ರವಲ್ಲ, ಮಗುವಿನ‌ ಸರ್ವ ಸೂಕ್ಷ್ಮ ಭಾಗಗಳನ್ನೂ ಸಂವೃದ್ಧಗೊಳಿಸಿ ಜೀವನವನ್ನು ರಸಮಯಗೊಳಿಸುತ್ತದೆ! ರಸಪೂರ್ಣ ಹೃದಯದ ನಮ್ಮ ಮಗು ತನ್ನ ಇಡೀ ಜೀವನದಲ್ಲಿ ಅದ್ಭುತಗಳನ್ನೇ ಮಾಡುತ್ತಾ ಯಶಸ್ಸನ್ನು ಅಂಗೈಯಲ್ಲಿ ಇಟ್ಟುಕೊಂಡಿರುತ್ತದೆ!

  ಹಾಗಾಗಿ, ಗರ್ಭಧಾರಣೆಯ ಪೂರ್ವ ಈ ತರಬೇತಿ ಪಡೆದು ಅನುಸರಿಸುವುದು ಅತ್ಯಂತ ಶ್ರೇಷ್ಠ ಮತ್ತು ಶಾಶ್ವತ ಚಿಕಿತ್ಸೆಯಾಗಿದೆ...

  ಸೂಚಿತ ಈ ಪರಿಹಾರಗಳ ಬಗ್ಗೆ ಆಳವಾದ ಮಾಹಿತಿ ಬೇಕಾದಲ್ಲಿ ಟೆಲಿಗ್ರಾಂ ಆ್ಯಪ್‌ನಲ್ಲಿರುವ 'ಆಸ್ಪತ್ರೆ‌ ರಹಿತ‌ ಜೀವನ ' ಗುಂಪಿಗೆ ಸೇರಿದರೆ ಆರೋಗ್ಯ ಸಂರಕ್ಷಕ ಮಾಹಿತಿಗಳ ಸುಮಾರು 700+ ಸಂಚಿಕೆಗಳಿರುವುದನ್ನು ಗಮನಿಸಬಹುದು...

ಟೆಲಿಗ್ರಾಂ ಲಿಂಕ್:
https://t.me/hospitalfreelife_kan

     🙏🏼   ಧನ್ಯವಾದಗಳು   🙏🏼
••••••••••••••••••••••••••••••••••••••••••••••
  ವಿಶ್ವ ಹೃದಯಾಶೀರ್ವಾದವಂ ಬಯಸಿ
  ~ಡಾ. ಮಲ್ಲಿಕಾರ್ಜುನ ಡಂಬಳ
  ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ; ಶಿವಮೊಗ್ಗ, ದಾವಣಗೆರೆ 

ಬ್ಲಾಗ್ ಲಿಂಕ್:
https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು