ಮಕ್ಕಳು ಸರಿಯಾಗಿ ಊಟ, ನೀರು ಸೇವಿಸುತ್ತಿಲ್ಲ; ನಿದ್ರೆ ಮಾಡುತ್ತಿಲ್ಲ! ಇವರಲ್ಲಿ ಕೌಶಲ್ಯ ಇಲ್ಲ -- ಇವೆಲ್ಲಕ್ಕೂ ನಮ್ಮ ಹಿರಿಯರಲ್ಲಿ ಒಂದೇ ಶಬ್ದದ ಪರಿಹಾರ ಇತ್ತು!

 🙏🏼  ಆತ್ಮೀಯರೇ, ನಮಸ್ಕಾರ  🙏🏼


  🍁 ಮಕ್ಕಳು ಸರಿಯಾಗಿ ಊಟ, ನೀರು ಸೇವಿಸುತ್ತಿಲ್ಲ; ನಿದ್ರೆ ಮಾಡುತ್ತಿಲ್ಲ! ಇವರಲ್ಲಿ ಕೌಶಲ್ಯ ಇಲ್ಲ -- ಇವೆಲ್ಲಕ್ಕೂ ನಮ್ಮ ಹಿರಿಯರಲ್ಲಿ ಒಂದೇ ಶಬ್ದದ ಪರಿಹಾರ ಇತ್ತು!  🍁

•••••••••••••••••••••••••••••••••••••••••••••

  ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ

  ಸಂಚಿಕೆ: 751, ದಿನಾಂಕ: 31.08.2023

•••••••••••••••••••••••••••••••••••••••••••••

  ಮಕ್ಕಳು ಸರಿಯಾಗಿ ಊಟ ಮಾಡುತ್ತಿಲ್ಲ; ನೀರು ಕುಡಿಯುತ್ತಿಲ್ಲ! ಸರಿಯಾಗಿ ನಿದ್ರಿಸುತ್ತಿಲ್ಲ; ಬೇಗ ಏಳುತ್ತಿಲ್ಲ!! ಇವರಲ್ಲಿ ಕೌಶಲ್ಯ ಇಲ್ಲ; ಸ್ಥಿರತೆ ಇಲ್ಲ -- ಇವೆಲ್ಲಕ್ಕೂ ನಮ್ಮ ಹಿರಿಯರಲ್ಲಿ ಒಂದೇ ಶಬ್ದದ ಪರಿಹಾರ ಇತ್ತು... ನಾವು ಆ ಲಿಂಕ್ ತಪ್ಪಿಸಿಕೊಂಡು ತೊಳಲಾಡುತ್ತಿದ್ದೇವೆ.


  ಈ ಲಿಂಕ್ ಬೆಸೆಯುವುದೇ ಇಂದಿನ ಲೇಖನದ ವಿಷಯವಾಗಿದೆ...


  ನಾವು ನಮ್ಮ ಮಕ್ಕಳಿಗೆ ಊಟ ಮಾಡಲು ಒತ್ತಾಯ ಮಾಡುತ್ತಿದ್ದೇವೆ! ನೀರು ಕುಡಿಯಲು ನೆನಪಿಸುತ್ತಿದ್ದೇವೆ!! ನಿದ್ರಿಸಿರಿ ಎಂದು ದುಂಬಾಲು ಬೀಳುತ್ತಿದ್ದೇವೆ!! ಬೇಗ ಏಳಿರೆಂದು ಬಯ್ಯುತ್ತಿದ್ದೇವೆ!??


  ಮಗು SSLC ಓದುತ್ತಿದ್ದರೆ, ತಾಯಿಗೆ ಆತಂಕ!! ಇಷ್ಟೆಲ್ಲಾ ಮಾಡಿಯೂ ಮಕ್ಕಳು ಪಿ.ಯು.ಸಿ. ದಾಟಿದ ತಕ್ಷಣ ನಮ್ಮ ಪ್ರಯತ್ನಗಳು ನಿಷ್ಪ್ರಯೋಜಕ ಎಂದು ಮರಳಿ ನಮಗೇ ಬಯ್ಯುತ್ತವೆ, ಹಂಗಿಸುತ್ತವೆ?!! 🤔


  ಇಷ್ಟೆಲ್ಲಾ ಕಷ್ಟಪಟ್ಟರೂ ಮಕ್ಕಳ ಮತ್ತು ಪೋಷಕರ ಕಡೆಯಿಂದಲೂ ಫಲಿತಾಂಶ ಶೂನ್ಯ!!! 🤭


  ಇದೆಲ್ಲಾ ಆಗುತ್ತಿರುವುದು, ನಮ್ಮ ಹಿರಿಯರ ಕಾರ್ಯವಿಧಾನವನ್ನು ಗಮನಿಸಿಲ್ಲ, ಅಷ್ಟೇ ಅಲ್ಲ ತಾತ್ಸಾರ ಮಾಡಿದ್ದೇವೆ ಕೂಡಾ! ನಮ್ಮ ಪಾಲಿಗೆ ಹಿರಿಯರ ಆಚರಣೆಗಳೆಲ್ಲಾ ಗೊಡ್ಡು, ಮೂಢ, ಅಪ್ರಯೋಜಕ, ನಿಮ್ಮ ಮಾತು, ಆಚರಣೆಗಳು ಇಂದಿನ ಜಮಾನಕ್ಕೆ ಒಗ್ಗಲ್ಲ ಮುಂತಾದ ಮಾತುಗಳಿಗೆ ಪುಷ್ಟಿಕೊಟ್ಟದ್ದೂ ಅಲ್ಲದೇ, ಅಪ್ರಾಯೋಗಿಕ ಓದು, ಡಿಗ್ರಿ, ಅಂಕಪಟ್ಟಿಯನ್ನು ಆರಾಧಿಸಿದ್ದು.


  ಇಂತಹ ಕುಟುಂಬದಲ್ಲಿ ಇನ್ನೊಂದು ಪೀಳಿಗೆ ಹಿರಿಯರ ಪ್ರಾಯೋಗಿಕ ವಿಧಾನವನ್ನು ತಿಳಿಯದಿದ್ದರೆ, ಅವರ ಮುಂದಿನ ಪೀಳಿಗೆಯ ಮಕ್ಕಳಿಗೆ ಉಣಿಸುವುದೇ ಬಹುದೊಡ್ಡ ಸಾಧನೆಯಾಗುತ್ತದೆ!!


  ನಾನು ಕಷ್ಟಪಟ್ಟು ಮಗುವಿಗೆ ಆಹಾರ ತಿನ್ನಿಸಿಬಿಟ್ಟೆ!!! ಎನ್ನುವ ಮಾತುಗಳು ದೂರ ಇಲ್ಲ!


  ಹಿರಿಯರು, ಊಟ ಮಾಡು, ನೀರು ಕುಡಿ, ಮಲಗು, ಏಳು... ಎಂದು ಒಮ್ಮೆಯೂ ಹೇಳದೇ ಎಲ್ಲಾ ಸಹಜವಾಗಿ ನಡೆಯುವಂತೆ ಮಾಡಿದ್ದರು? ಹಾಗಾದರೆ ಅವರು ಏನು ಮಾಡುತ್ತಿದ್ದರು? ಮಕ್ಕಳಿಗೆ ಹೇಗೆ ಜೀವನ ತರಬೇತಿ ಕೊಟ್ಟಿದ್ದರು? ಈ ಲಿಂಕ್ ಬೇಕೇ?


  ಉಚಿತವಾಗಿ ನಡೆಯುವ ಹರ್‌ಘರ್ ಆಯುರ್‌ಜ್ಞಾನ್' ತರಬೇತಿ ಪಡೆಯಿರಿ' ಅಲ್ಲಿ ವಿಸ್ತೃತ ವಿವರಣೆ, ಸಮಸ್ಯೆಯ ಮೂಲ ಕಾರಣ, ಸಾಧ್ಯಾಸಾಧ್ಯತೆಯ ಚರ್ಚೆ, ಪರಿಹಾರ ಎಲ್ಲವೂ ಇದೆ...


  ನಮ್ಮ ಹಿರಿಯರು ಒಂದೇ ಒಂದನ್ನು ತಪ್ಪದೆ ಮಾಡಿ ಎಲ್ಲವನ್ನು ಸರಿದೂಗಿಸಿದ್ದರು ಅದುವೇ 'ಕೆಲಸ!'


  ಅವರು ಮಾತು ಕಡಿಮೆ ಇಟ್ಟುಕೊಂಡು ನಿರಂತರ ಯಥೇಚ್ಛವಾಗಿ ಕೆಲಸ ಮಾಡುತ್ತಿದ್ದರು, ಮಕ್ಕಳು ಅದನ್ನು ನೋಡಿ ಅನಿವಾರ್ಯವಾಗಿ ಅನುಸರಿಸುತ್ತಿದ್ದರು. ಕೆಲಸ ಮಾಡದ ಮಕ್ಕಳಿಗೆ ಶಿಕ್ಷೆ ಇತ್ತು, ಒಂದು ದಿನ ಮಕ್ಕಳಿಗೆ ತಮ್ಮನ್ನು ಇಡೀ ದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದನ್ನು ರೂಢಿ ಮಾಡಿಬಿಡುತ್ತಿದ್ದರು. ಗಮನಿಸಿ ನೋಡಿ: ಬಾಲ್ಯದಲ್ಲಿ ನಿರಂತರ ಕೆಲಸ ಮಾಡಿದವರು, ಈಗ ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಕೆಲಸಗಳ ವಿನಃ ಇರಲು ಸಾಧ್ಯವೇ ಇಲ್ಲ. ವಯಸ್ಸಾದ ಅಮ್ಮನಿಗೆ ಸ್ವಲ್ಪ ರೆಸ್ಟ್ ಮಾಡಮ್ಮ ಎಂದರೆ ಅವರು ಮಾತೇ ಕೇಳಲ್ಲ, ಕೆಲಸ ಮಾಡ್ತಾನೇ ಇರ್ತಾರೆ, ಇದಕ್ಕೆಲ್ಲಾ ಕಾರಣ ಅವರ ನರನಾಡಿಗಳು ಕೆಲಸಗಳೊಂದಿಗೆ ತಮ್ಮನ್ನು ತಾವು ಬೆಸೆದುಕೊಂಡಿವೆ. ತಮಗೆ ಕೆಲಸ ಅಗದಷ್ಟು ವಯಸ್ಸಾಗಿ, ಸುಸ್ತಾಗಿ ಹಾಸಿಗೆ ಹಿಡಿದರೂ ಕುಟುಂಬದ ಸದಸ್ಯರಿಗೆ ಕೆಲಸ ಮಾಡುವಂತೆ ಒತ್ತಾಯ ಮಾಡುತ್ತಾರೆ, ಅಲ್ಲವೇ? ಇದನ್ನು ಆ ಸೊಸೆಯು 'ಅಜ್ಜಿಯ ಕಾಟ' ಎಂಬಂತೆ ತನ್ನ ಮಕ್ಕಳಿಗೆ ಬೋಧನೆ ಮಾಡುತ್ತಾಳೆ.


  ಈಗ ಪರಿಹಾರ ನೋಡಿ:

  ಚೆನ್ನಾಗಿ ಕೆಲಸ ಮಾಡಿದ ಮೇಲೆ --

• ಊಟ ಮಾಡು

• ನೀರು ಕುಡಿ

• ಬೇಗ ಮಲಗು

• ಬೇಗ ಏಳು

• 

  ಇವೆಲ್ಲ ಹೇಳುವ ಅಗತ್ಯ ಇದೆಯೇ? 


  ಒಂದೇ 'ಕೆಲಸ ' ಶಬ್ದದಿಂದ ಇಂದಿನ ತಾಯಂದಿರ 'ಅಷ್ಟಕಷ್ಟ'ಗಳಾದ ಮಕ್ಕಳ ಪಾಲನೆ-ಪೋಷಣೆಯನ್ನು ಸರಳಗೊಳಿಸಿದ್ದರು.


  ನಮ್ಮ ಬಾಲ್ಯದಲ್ಲಿ ಇವನ್ನೆಲ್ಲಾ ಹೇಳಿಸಿಕೊಂಡಿದ್ದೆವೆ?! ಇಲ್ಲ ತಾನೆ? ಈಗಲೂ ಹಾಗೇ ಮಾಡಿ, ಪರಿಹಾರ ಸರಳ!


     🙏🏼  ಧನ್ಯವಾದಗಳು  🙏🏼

•••••••••••••••••••••••••••••••••••••••••••••

  'ಆಸ್ಪತ್ರೆ‌ ರಹಿತ‌ ಜೀವನ' ಗುಂಪಿನ ಹಿಂದಿನ 700+ ಸಂಚಿಕೆಗಳು ಟೆಲಿಗ್ರಾಂ ಆ್ಯಪ್‌ನಲ್ಲಿ ಮಾತ್ರ ಕಾಣಸಿಗುತ್ತವೆ.


  ಆಸಕ್ತರು ಲಿಂಕ್ ಬಳಸಿ ಟೆಲಿಗ್ರಾಂ ಗುಂಪಿಗೆ ಸೇರಬಹುದು:

https://t.me/hospitalfreelife_kan


        🙏🏼  ಧನ್ಯವಾದಗಳು  🙏🏼

•••••••••••••••••••••••••••••••••••••••••••••

  ವಿಶ್ವ ಹೃದಯಾಶೀರ್ವಾದವಂ ಬಯಸಿ

  ~ಡಾ. ಮಲ್ಲಿಕಾರ್ಜುನ ಡಂಬಳ

  ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ; ಶಿವಮೊಗ್ಗ, ದಾವಣಗೆರೆ


ಬ್ಲಾಗ್ ಲಿಂಕ್:

https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು