ಜೀವಕೋಶಗಳಿಗೆ ಬಾಧಕ ತರುವ ಜೀವನಶೈಲಿ -ಭಾಗ-1

🍁 ಜೀವಕೋಶಗಳಿಗೆ ಬಾಧಕ ತರುವ ಜೀವನಶೈಲಿ -- ಭಾಗ-1 🍁
••••••••••••••••••••••••••••••••••••••••••••••
  ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ 
  ಸಂಚಿಕೆ: 739
ದಿನಾಂಕ: 27.05.2023
••••••••••••••••••••••••••••••••••••••••••••••
  ನಮ್ಮ ಆರೋಗ್ಯವನ್ನು ಸದೃಢವಾಗಿಡುವಲ್ಲಿ ಜೀವಕೋಶಗಳ ಪೊರೆಯು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ...

  ಜೀವಕೋಶದ ಒಳಗೆ ಮತ್ತು ಹೊರಗೆ ಋಣಾತ್ಮಕ (-70mV) ಮತ್ತು ಧನಾತ್ಮಕ (+50mV) ವಿದ್ಯುತ್ ವಲಯ ಇರುತ್ತದೆ. ಅದರ ಪರಿಣಾಮದಿಂದಲೇ ಆಹಾರದ ಕಣಗಳು ಒಳಕ್ಕೆ ಮತ್ತು ಕಲ್ಮಶಗಳು ಹೊರಕ್ಕೆ ಹರಿಯುತ್ತವೆ.

  ಈ ಕ್ರಿಯೆಯನ್ನು ವಿಕೃತಗೊಳಿಸಿದರೆ ಬರಬಹುದಾದ 'ಜೀವಕೋಶಗಳ ಪ್ರತಿಕ್ರಿಯೆ'ಯನ್ನು ಅಧ್ಯಯನ ಮಾಡಲು --
• ಅಕಸ್ಮಾತ್ತಾಗಿ ಸೂಕ್ಷ್ಮ ವಿದ್ಯುತ್ ಪ್ರವಾಹ ಹರಿಸುವುದು.
• ರಾಸಾಯನಿಕಗಳನ್ನು ಹರಿಸಿ ಆ್ಯಸಿಡ್-ಬೇಸ್ ವ್ಯತ್ಯಾಸ ಮಾಡುವುದು.
• ಅಕಸ್ಮಾತ್‌ ಆಗಿ ತಾಪಮಾನ ವ್ಯತ್ಯಾಸ ಮಾಡುವುದು.

  ಇದನ್ನು ಮಾಡಿ ಜೀವಕೋಶಗಳ ಪ್ರತಿಕ್ರಿಯೆ ನೋಡಲಾಯಿತು, ಈ ಮೂರರಲ್ಲಿ ಯಾವುದಾದರೂ ಒಂದನ್ನು ಮಾಡಿದರೂ ಸಹ 'ಸೋಡಿಯಂ ಪಂಪ್' ಕ್ರಿಯೆ' ತಾತ್ಕಾಲಿಕವಾಗಿ ನಿಷ್ಕ್ರಿಯಗೊಂಡು ಜೀವಕೋಶಗಳ ವ್ಯಾಪಾರ ವಿಕೃತಗೊಂಡು ಜೀವಕೋಶಗಳಲ್ಲಿ ಊತ ಉಂಟಾಯಿತು, ಇದನ್ನು ಐಟೀಸ್ (itis) ಎಂದು ವಿಜ್ಞಾನ ಕರೆದಿದೆ...

  ಈ ಐಟೀಸ್ ಸೋಂಕಿನಿಂದ ಬಂದುದಲ್ಲ, ಸೋಂಕುರಹಿತ ಊತಗಳು (ಐಟೀಸ್) ಯಾವಾಗಲೂ ದೀರ್ಘಕಾಲೀನವಾಗಿರುತ್ತವೆ ಮತ್ತು ಅಪಾಯಕಾರಿಗಳಾಗಿರುತ್ತವೆ.

  ಹಾಗಾಗಿ ಇದು ಸೋಂಕುರಿತ ಊತವಾದ ನೆಗಡಿ(ಅಲರ್ಜಿ)ಯಿಂದ ಪ್ರಾರಂಭಿಸಿ ಕ್ಯಾನ್ಸರ್‌ವರೆಗೆ ಅಪಾಯಕಾರೀ ರೋಗಗಳನ್ನು ತರುತ್ತದೆ. 🤔
••••••••••••••••••••••••••••••••••••••••••••••
  ಈಗ ನಮ್ಮ ಗಮನವನ್ನು ಜೀವನಶೈಲಿಯ ಕಡೆಗೆ ತಿರುಗಿಸೋಣ...

• ಮನೋಒತ್ತಡಗಳಿಂದ (ಅತಿ ಆಸೆ, ಕೌಟುಂಬಿಕ, ವ್ಯಾವಹಾರಿಕ, ಕಛೇರಿ ಕೆಲಸ... ಮುಂತಾದವು) ಮೆದುಳಿನ ವಿದ್ಯುತ್ ಪ್ರವಾಹದ ಏರುಗತಿ ಅಥವಾ ವಿಪರೀತಗತಿಗೆ ತಿರುಗಿಸುವುದು.
• ರಾಸಾಯನಿಕಗಳಿಂದ ಬೆಳೆದ, ಕೀಟನಾಶಕಗಳಿಂದ ಆವರಿಸಲ್ಪಟ್ಟ ಆಹಾರ ಪದಾರ್ಥಗಳ ನಿರಂತರ ಸೇವನೆ.
• ನಿರಂತರ ತೀವ್ರವಾಗಿ ಇಳಿಸಿದ AC ಯಲ್ಲಿ (16°c to 18°c) ಕುಳಿತು ಕೆಲಸ ಮಾಡುವುದು...

  ಇವುಗಳಿಂದ ಜೀವಕೋಶಗಳ ಪೊರೆಯ ಮೇಲ್ಭಾಗದ ವಿದ್ಯುತ್ ಪ್ರವಾಹ ವ್ಯತ್ಯಾಸವಾಗಿ, ಒಳಗಿರಬೇಕಾದ ಶಕ್ತಿ ಹೊರಬಂದು ತೀವ್ರ ನಿಶ್ಯಕ್ತಿ ಉಂಟುಮಾಡುವ ರಕ್ತಹೀನತೆ, ಹೈಪೋಥೈರಾಯ್ಡಿಸಮ್, ಮಧುಮೇಹ, ಬಿ.ಪಿ... ಮುಂತಾದವು ಬರುತ್ತಿವೆ, ಹಾಗೆಯೇ ಹೊರಗೆ ಹೋಗಬೇಕಾದ ಕಲ್ಮಶಗಳು ಜೀವಕೋಶದ ಒಳಗೆ ಉಳಿದು ಅಲರ್ಜಿ, ಆಟೋಇಮ್ಯೂಮ್ ಕಾಯಿಲೆ, ಯಕೃತ್, ಕಿಡ್ನಿ ತೊಂದರೆ, ಕ್ಯಾನ್ಸರ್... ಮುಂತಾದ ಅಪಾಯಕಾರಿ ಕಾಯಿಲೆಗಳು ಹೆಚ್ಚುತ್ತಿವೆ.

ಪರಿಹಾರ:
• ಅತ್ಯಾಸೆ ಅಥವಾ ಲೋಭರಹಿತ, ಆನಂದಕರ ಜೀವನಕ್ಕೆ ಮೊಟ್ಟ ಮೊದಲ ಪ್ರಾಶಸ್ತ್ಯ ಕೊಡುವುದು.
• ನೈಸರ್ಗಿಕ ಆಹಾರ ಸೇವನೆ (ಇದರಿಂದ ಶರೀರದ ಶಕ್ತಿಯ ಜೊತೆಗೆ, ಮನಸ್ಸಿಗೆ ಒತ್ತಡ ತಡೆಯುವ ಸಾಮರ್ಥ್ಯ ಬರುತ್ತದೆ).
• ನಿತ್ಯವೂ ಶಾರೀರಿಕ ವ್ಯಾಯಾಮ, ಬಿಸಿಲಿಗೆ ಮೈ ಒಡ್ಡುವುದು.
• ನೆಮ್ಮದಿಯ ನಿದ್ದೆ.

  ಇವು ಶಾಶ್ವತ ಪರಿಹಾರಗಳಾಗಿವೆ...

  ಸೂಚಿತ ಈ ಪರಿಹಾರಗಳ ಬಗ್ಗೆ ಆಳವಾದ ಮಾಹಿತಿ ಬೇಕಾದಲ್ಲಿ ಟೆಲಿಗ್ರಾಂ ಆ್ಯಪ್‌ನಲ್ಲಿರುವ 'ಆಸ್ಪತ್ರೆ‌ ರಹಿತ‌ ಜೀವನ ' ಗುಂಪಿಗೆ ಸೇರಿದರೆ ಆರೋಗ್ಯ ಸಂರಕ್ಷಕ ಮಾಹಿತಿಗಳ ಸುಮಾರು 700+ ಸಂಚಿಕೆಗಳಿರುವುದನ್ನು ಗಮನಿಸಬಹುದು.

ಟೆಲಿಗ್ರಾಂ ಲಿಂಕ್:
https://t.me/hospitalfreelife_kan

     🙏🏼  ಧನ್ಯವಾದಗಳು  🙏🏼
••••••••••••••••••••••••••••••••••••••••••••••
  ವಿಶ್ವ ಹೃದಯಾಶೀರ್ವಾದವಂ ಬಯಸಿ
  ~ಡಾ. ಮಲ್ಲಿಕಾರ್ಜುನ ಡಂಬಳ
  ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ; ಶಿವಮೊಗ್ಗ, ದಾವಣಗೆರೆ

ಬ್ಲಾಗ್ ಲಿಂಕ್:
https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು