ಮನಸ್ಸನ್ನು ಸದಾ ಆನಂದದಿಂದ ಇಟ್ಟುಕೊಳ್ಳುವುದೇ ಆರೋಗ್ಯದ ಗುಟ್ಟು!

 🙏🏼   ಅಮೃತಾತ್ಮರೇ, ನಮಸ್ಕಾರ   🙏🏼


  🍁  ಮನಸ್ಸನ್ನು ಸದಾ ಆನಂದದಿಂದ ಇಟ್ಟುಕೊಳ್ಳುವುದೇ ಆರೋಗ್ಯದ ಗುಟ್ಟು!  🍁

•••••••••••••••••••••••••••••••••••••••••••••

  ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ

  ಸಂಚಿಕೆ: 757, ದಿನಾಂಕ: 08.09.2023

•••••••••••••••••••••••••••••••••••••••••••••

  ಬೇರೆಯವರ ನಡವಳಿಕೆಗಳಿಗೆ ನಿಮ್ಮ ಮನಸ್ಸನ್ನು ನೋಯಿಸಬೇಡಿ, ಕೊರಗಿಸಬೇಡಿ, ಕುಸಿದುಹೋಗದಿರಿ... ಮನಸ್ಸನ್ನು ಸದಾ ಆನಂದದಿಂದ ಇರಲು ಬಿಡಿ. ಇದೇ ಆರೋಗ್ಯದ ಗುಟ್ಟು! 


  ಇದಕ್ಕಿದ್ದಂತೆ, ಒಂದು ಹಾವು ನಮ್ಮ ಪಕ್ಕದಲ್ಲಿ ಬಂದರೆ ತಕ್ಷಣ ಎದೆಬಡಿತ ಹೆಚ್ಚುತ್ತದೆ. 🙄  ನಾವು ಕಣ್ಮುಚ್ಚಿ ಕುಳಿತಾಗ 100 ಹಾವುಗಳು ಹರಿದುಹೋದರೂ ಎದೆಬಡಿತ ಏರದು...! ಹಾವು ಹೋದದ್ದರಿಂದ ಹೃದಯಬಡಿತ ಹೆಚ್ಚಿದ್ದಲ್ಲ, ಮನಸ್ಸು ಅದಕ್ಕೆ ಸ್ಪಂದಿಸುವ ಕಾರಣದಿಂದಾಗಿ ಅದು ಹೆಚ್ಚಾಯ್ತು. 🤔


  ಸರಿಸುಮಾರು ನಿಮಿಷಕ್ಕೆ 72 ಇರಬೇಕಾದ ಹೃದಯದ ಬಡಿತ, 150 ರವರೆಗೆ ಹೆಚ್ಚುವುದನ್ನು ನೋಡಿದ್ದೇವೆ...


ಇದು ಆದದ್ದು ಹೇಗೆಂದು ನೋಡೋಣ:


  ಮನಸ್ಸು ಆತಂಕಗೊಂಡಾಗ, ಕೋಪಗೊಂಡಾಗ, ಭಯಗೊಂಡಾಗ ಕ್ಷಣಮಾತ್ರದಲ್ಲಿ ಅಡ್ರಿನ್ಯಾಲಿನ್ ಹಾರ್ಮೋನು ವೇಗದಿಂದ ಸ್ರವಿಸುತ್ತದೆ. ತಕ್ಷಣ ಇಡೀ ಶರೀರದ ಮಾಂಸಖಂಡಗಳಿಗೆ ವಿಶೇಷ ಬಲ ಬರುತ್ತದೆ, ಶರೀರದಂತೆ ಹೃದಯದ ಮಾಂಸಖಂಡಗಳೂ ಸಂಕೋಚಗೊಳ್ಳುವ ಕಾರಣ ಹೃದಯದ ಬಡಿತ ಏರುತ್ತದೆ. ಈ ಏರುವಿಕೆಯ ತೀವ್ರತೆ ವ್ಯಕ್ತಿಯ ಮನಸ್ಸಿನ ಸಾಮರ್ಥ್ಯವನ್ನು ಅವಲಂಬಿಸಿದೆ.


  ರಸಧಾತುವಿಗೆ ಅಲ್ಪ ಸಾಮರ್ಥ್ಯವುಳ್ಳ ವ್ಯಕ್ತಿಗೆ ಸ್ವಲ್ಪವೇ ಹಾರ್ಮೋನ್ ಸ್ರಾವಕ್ಕೆ ಮಾಂಸಖಂಡಗಳು ಅತಿಯಾಗಿ ಸ್ಪಂದಿಸುತ್ತವೆ, ಹೃದಯಬಡಿತ ಏರುತ್ತದೆ. ಆಗ ಸರ್ವ ಶರೀರದ ರಕ್ತನಾಳಗಳೂ ಸಂಕೋಚಗೊಂಡು ರಕ್ತ ತೀವ್ರಗತಿಯಿಂದ ಹರಿಯುತ್ತದೆ, ನಿಧಾನವಾಗಿ ಬಿ.ಪಿ. ಹೆಚ್ಚುತ್ತಾ ಸಾಗುತ್ತದೆ... 😟


  ಹೀಗೆಯೇ, ನಿತ್ಯವೂ ನಮ್ಮ ಮನಸ್ಸನ್ನು ಬೇರೆಯವರ ನಡವಳಿಕೆಗಳಿಗೆ ಸ್ಪಂದಿಸುತ್ತಾ, ಒಳಗೊಳಗೆ ನಮ್ಮ ಮನಸ್ಸನ್ನು ನೋಯಿಸುತ್ತಾ ಸಾಗಿದರೆ, ಯಾವಾಗಲೂ ಮೊದಲ ಹೊಡೆತ ಬೀಳುವುದು ರಸಧಾತುವಿನ ಮೇಲೆ. ಈ ಕ್ಷಣಮಾತ್ರದಲ್ಲಿ ಶರೀರದ ರಸಧಾತು ತೀವ್ರವಾಗಿ ಕುಸಿಯುತ್ತದೆ.


  ನಂತರ ಕ್ಲೇಶ ಸಹಿಷ್ಣುತೆಯು ಸಾಕಷ್ಟು ಇಳಿದುಬಿಡುತ್ತದೆ, ಅಂದರೆ ಸಣ್ಣ ಸಣ್ಣ ವಿಷಯಗಳಿಗೂ ತಡೆದುಕೊಳ್ಳುವ ಸಾಮರ್ಥ್ಯ ಕ್ಷೀಣಿಸಿ ಕಿರಿಕಿರಿಯು ನಮ್ಮ ಸ್ವಭಾವವಾಗಿಯೇ ಬಿಡುತ್ತದೆ. ಇದು ಸರ್ವ ರೋಗಗಳನ್ನೂ ತೀವ್ರಗತಿಯಲ್ಲಿ ತರುವ ಬಲವಾದ ಕಾರಣವಾಗಿದೆ. 🤔


  ಹಾಗಾಗಿ, ಯಾವುದೇ ರೋಗ ಬರಬಾರದೆಂದರೆ, ಶಾಂತತೆಯನ್ನು ರೂಢಿಸಿಕೊಳ್ಳಬೇಕು, ಹೊರಗಡೆ ಏನಾದರೂ ಆಗಲಿ, ಒಳಗೆ ಶಾಂತವಾಗಿ ಇದ್ದು  ನಿರಂತರ ನಿಮಗೆ ಬೇಕಾದಂತೆ ಜೀವನ ರೂಪಿಸಿಕೊಳ್ಳುತ್ತಾ, ಒಳಿತು-ಕೆಡುಕುಗಳ ಹೊಣೆಯನ್ನು ಸ್ವಂತ ಹೆಗಲಿಗೆ ಏರಿಸಿಕೊಂಡು ಸಾಗಿದಲ್ಲಿ ಖಂಡಿತಾ ಸರ್ವದಾ ನೆಮ್ಮದಿ ನಿಮ್ಮ‌ ಜೊತೆಗೆ ಇರುತ್ತದೆ. 🤭


        ಧನ್ಯವಾದಗಳು

•••••••••••••••••••••••••••••••••••••••••••••

  'ಆಸ್ಪತ್ರೆ‌ ರಹಿತ‌ ಜೀವನ' ಗುಂಪಿನ ಹಿಂದಿನ 700+ ಸಂಚಿಕೆಗಳು ಟೆಲಿಗ್ರಾಂ ಆ್ಯಪ್‌ನಲ್ಲಿ ಮಾತ್ರ ಕಾಣಸಿಗುತ್ತವೆ.


  ಆಸಕ್ತರು ಲಿಂಕ್ ಬಳಸಿ ಟೆಲಿಗ್ರಾಂ ಗುಂಪಿಗೆ ಸೇರಬಹುದು:

https://t.me/hospitalfreelife_kan


        🙏🏼  ಧನ್ಯವಾದಗಳು  🙏🏼

•••••••••••••••••••••••••••••••••••••••••••••

  ವಿಶ್ವ ಹೃದಯಾಶೀರ್ವಾದವಂ ಬಯಸಿ

  ~ಡಾ. ಮಲ್ಲಿಕಾರ್ಜುನ ಡಂಬಳ

  ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ; ಶಿವಮೊಗ್ಗ, ದಾವಣಗೆರೆ


ಬ್ಲಾಗ್ ಲಿಂಕ್:

https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು