ಮೆದುಳಿನ ಜೀವಕೋಶಗಳಿಗೆ ಬಾಧಕ ತರುವ ಜೀವನಶೈಲಿ -- {ಭಾಗ-4} 'ಸ್ಕಿಜೋಫ್ರೀನಿಯಾ(Schizophrenia)'

🍁 ಮೆದುಳಿನ ಜೀವಕೋಶಗಳಿಗೆ ಬಾಧಕ ತರುವ ಜೀವನಶೈಲಿ -- {ಭಾಗ-4} 'ಸ್ಕಿಜೋಫ್ರೀನಿಯಾ(Schizophrenia)' 🍁
••••••••••••••••••••••••••••••••••••••••••••••
  ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ
  ಸಂಚಿಕೆ: 742
ದಿನಾಂಕ: 04.06.2023
••••••••••••••••••••••••••••••••••••••••••••••
  'ಸ್ಕಿಜೋಫ್ರೀನಿಯಾ (Schizophrenia)'

  ವ್ಯಕ್ತಿಯ ನರತಂತುಗಳಲ್ಲಿ ತೀವ್ರಗತಿಯ, ಅನಿಯಂತ್ರಿತ ಸ್ಪಂದನೆಗಳಿರುವ 'ಸ್ಕಿಜೋಫ್ರೀನಿಯಾ(Schizophrenia)' ಕಾಯಿಲೆಯ ಸಂಕ್ಷಿಪ್ತ ಮಾಹಿತಿಯನ್ನು ಈಗ ನೋಡೋಣ...
••••••••••••••••••••••••••••••••••••••••••••••
  'ಸ್ಕಿಜೋಫ್ರೀನಿಯಾ (Schizophrenia)' ಲಕ್ಷಣಗಳೇನು? 

1) ರೋಗಿಯ ನಡವಳಿಕೆಯಲ್ಲಿ ಕಾಣುವ ಲಕ್ಷಣಗಳು:
• ಸಾಮಾಜಿಕವಾಗಿ ತಾನು ಪ್ರತ್ಯೇಕ ಎಂಬ ಯೋಚನೆ ಮತ್ತು ಪ್ರತ್ಯೇಕವಾಗಿ ಇರುವುದು
• ಅಸಂಘಟಿತ ನಡವಳಿಕೆ (ಒಟ್ಟಾಗಿ ಕೆಲಸ ಮಾಡದಿರುವಿಕೆ)
• ಆಕ್ರಮಣಶೀಲ, ಜೋರಾಗಿ ನಡೆದುಕೊಳ್ಳುವುದು
• ಸಣ್ಣ ಕೆಲಸಕ್ಕೆ ಅತ್ಯುತ್ಸಾಹದಿಂದ ಆಂದೋಲನ ಹೂಡುವುದು
• ಶುಷ್ಕ ಮತ್ತು ಕಡ್ಡಾಯ ನಡವಳಿಕೆ
• ಅತಿ/ಅನಗತ್ಯ ಉತ್ಸಾಹ
• ಸಣ್ಣ ವಿಷಯಕ್ಕೂ ಹಗೆತನ
• ಪುನರಾವರ್ತಿತ ಚಲನೆಗಳು
• ಸ್ವಯಂ-ಹಾನಿ ಅಥವಾ ಸಂಯಮದ ಕೊರತೆ

2) ರೋಗಿಯ ಅರಿವಿನಲ್ಲಿ ಕಾಣುವ ಲಕ್ಷಣಗಳು: 
• ಆಲೋಚನಾ ಅಸ್ವಸ್ಥತೆ(ಒಂದು ನೋಡಿದರೆ/ ಹೇಳಿದರೆ ಇನ್ನೊಂದು ಅರ್ಥ ಮಾಡಿಕೊಂಡು ಯೋಚಿಸುವುದು)
• ಭ್ರಮೆ
• ವಿಸ್ಮೃತಿ
• ಸಾಮಾನ್ಯ ಘಟನೆಗೆ ವಿಶೇಷ ಮತ್ತು ವೈಯಕ್ತಿಕ ಅರ್ಥವಿದೆ ಎಂಬ ನಂಬಿಕೆ
• ಆಲೋಚನೆಗಳು ಸ್ವಂತದ್ದಲ್ಲ ಎಂಬ ನಂಬಿಕೆ
• ದಿಗ್ಭ್ರಮೆ
• ಮಾನಸಿಕ ಗೊಂದಲ
• ಚಟುವಟಿಕೆಯಲ್ಲಿ ನಿಧಾನ ಅಥವಾ ಶ್ರೇಷ್ಠತೆಯ ತಪ್ಪು ನಂಬಿಕೆ

3) ರೋಗಿಯ ಮನಸ್ಥಿತಿ: 
• ಕೋಪ
• ಆತಂಕ
• ನಿರಾಸಕ್ತಿ
• ತನ್ನಿಂದ ಬೇರ್ಪಟ್ಟ ಭಾವನೆ
• ಸಾಮಾನ್ಯ ಅತೃಪ್ತಿ
• ಚಟುವಟಿಕೆಗಳಲ್ಲಿ ಆಸಕ್ತಿ ಅಥವಾ ಆನಂದದ ನಷ್ಟ
• ಶ್ರೇಷ್ಠರೆಂಬ ಮನಸ್ಥಿತಿ
• ಅನುಚಿತ ಭಾವನಾತ್ಮಕ ಪ್ರತಿಕ್ರಿಯೆ

4) ಮಾನಸಿಕ ಲಕ್ಷಣಗಳು: 
• ಭ್ರಮೆ
• ಮತಿವಿಕಲ್ಪ
• ಧ್ವನಿಗಳನ್ನು ಕೇಳುವುದು
• ಖಿನ್ನತೆ
• ಭಯ
• ಕಿರುಕುಳದ ಭ್ರಮೆ ಅಥವಾ ಧಾರ್ಮಿಕ ಭ್ರಮೆ

5) ಮಾತುಗಳಲ್ಲಿ ಕಾಣುವುದು:
• ಅಸಾಂದರ್ಭಿಕ ಮಾತು
• ಅಸಂಗತ ಮಾತು
• ತಕ್ಷಣ ಪ್ರತಿಕ್ರಿಯೆ
• ಕಡ್ಡಿ ಮುರಿದಂತೆ ಸಂಬಂಧಕ್ಕೆ ಧಕ್ಕೆ ತರುವ ಕೊನೆಯ ಹಂತದ ​​ಮಾತುಗಳು
• ಮಾತಿನಲ್ಲಿ ಅಸ್ವಸ್ಥತೆ

6) ಹೆಚ್ಚುವರಿ ಸಾಮಾನ್ಯ ಲಕ್ಷಣಗಳು: 
• ಆಯಾಸ
• ದುರ್ಬಲಗೊಂಡ ಮೋಟಾರ್ ನರಗಳ ಕಾರಣ ಸ್ಪಂದನೆಯ ಕೊರತೆ
• ಭಾವನಾತ್ಮಕ ಪ್ರತಿಕ್ರಿಯೆಯ ಕೊರತೆ
• ಸ್ಮೃತಿ ನಾಶ

ಸೂಕ್ಷ್ಮವಾಗಿ ಗಮನಿಸಿ:
  ಮೇಲಿನ ಲಕ್ಷಣಗಳಲ್ಲಿ ಕೆಲವಾದರೂ ಹೆಚ್ಚಿನ ಜನರಿಗೆ ಇವೆ, ಹಾಗಾದರೆ ಎಲ್ಲರೂ ಸ್ಕಿಜೋಫ್ರೀನಿಯಾ ರೋಗಿಗಳೇ?
 
  'ಸ್ಕಿಜೋಫ್ರೀನಿಯಾ (Schizophrenia)' ನಮಗೂ ಇದೆಯೇ ಎಂಬ ಯೋಚನೆ ಬರುತ್ತಿದೆಯೇ?

  ಹೌದು, ಅದು ಸ್ಕಿಜೋಫ್ರೀನಿಯಾ ಅಲ್ಲದಿದ್ದರೂ ಒಂದು ರೀತಿಯ ಮಾನಸಿಕ ಸ್ಪಂದನೆಯ ಅಡತಡೆಗಳಾಗಿದೆ.

  ಇವೆಲ್ಲಾ ಏಕೆ ಕಾಣುತ್ತವೆ ಎಂದರೆ, ನರ ತಂತುಗಳಲ್ಲಿ ಆಗುವ ರಾಸಾಯನಿಕ ಏರುಪೇರುಗಳಿಂದ ಹೀಗಾಗುತ್ತದೆ.

  ಈ ರಾಸಾಯನಿಕಗಳ ಏರುಪೇರಿನ ಮೂಲ ಕಾರಣಗಳನ್ನು ಆಯುರ್ವೇದ ಸ್ಪಷ್ಟವಾಗಿ ಹೇಳುತ್ತದೆ, ಅವುಗಳನ್ನು ತ್ಯಜಿಸಿದರೆ ಅನೇಕ ಮನೋವೇದನೆಗಳನ್ನು ದೂರ ಇಡಬಹುದು. 🤔

  ಇರಲಿ, ಈಗ ಸ್ಕಿಜೋಫ್ರೀನಿಯಾ ಎನ್ನಲು ಮುಖ್ಯವಾಗಿ ಇರಲೇಬೇಕಾದ ಲಕ್ಷಣಗಳನ್ನು ನೋಡೋಣ. ಕೆಳಗಿನ ಮೂರು ಲಕ್ಷಣಗಳಿದ್ದರೆ ಮಾತ್ರ ಸ್ಕಿಜೋಫ್ರೇನಿಯಾ ರೋಗಿ ಎಂದು ಗ್ರಹಿಸಬಹುದು.

• Delusions 
  ಅಂದರೆ ಸದಾ ಭ್ರಮೆಯ ಲೋಕವನ್ನೇ ದರ್ಶಿಸುವುದು, ವಾಸ್ತವ ಕಣ್ಣಿಗೆ ಕಾಣದು, ಕಿವಿಗೆ ಕೇಳದು, ತನ್ನ ಲೋಕದಲ್ಲಿ ಕಾಲ್ಪನಿಕವಾಗಿ ನಡೆಯುವ ಘಟನೆಗಳನ್ನೇ ವಾಸ್ತವ ಎಂದು ಭಾವಿಸಿ ಮಾತನಾಡುವುದು ಮತ್ತು ನಡೆದುಕೊಳ್ಳುವುದು.

• Hallucinations
  ಇದೂ ಸಹ Delusions ನಂತೆಯೇ ಕಾಣುತ್ತದೆ, ಆದರೆ ಇಲ್ಲಿ ವಸ್ತುಗಳ ಬಗೆಗೆ, ಘಟನೆಯ ಬಗೆಗೆ, ವ್ಯಕ್ತಿಗಳ ಬಗೆಗೆ ಸಂಪೂರ್ಣ ಅಪನಂಬಿಕೆ ಪ್ರಧಾನವಾಗಿ ಇರುತ್ತದೆ. ಏನೇ ಹೇಳಿದರೂ, ನೀವು ಕದ್ದು ನೋಡುತ್ತೀರಿ, ಕದ್ದಾಲಿಸುತ್ತೀರಿ, ಆ ಘಟನೆ ನನ್ನನ್ನೇ ಉದ್ದೇಶಿಸಿ ನಡೆಯುತ್ತಿದೆ, ಆ ಪ್ರಾಣಿಗೆ ನನ್ನ ಮನಸ್ಸು ತಿಳಿಯುತ್ತದೆ, ಅದು ನನ್ನ ಎಲ್ಲಾ ಯೋಚನೆಗಳನ್ನು ಕದಿಯುತ್ತದೆ.... ಹೀಗೆ

• Disorganized speech
  ಅಂದರೆ ಮಾತುಗಳು ಪೂರಕವಾಗಿ ಇರುವುದಿಲ್ಲ, ಯಾರು ಏನೇ ಹೇಳುತ್ತಿದ್ದರೂ ತಮ್ಮದೇ ಮಾತನ್ನು ಪದೇ ಪದೇ ಹೇಳುತ್ತಾರೆ, ಪ್ರತಿಪಾದಿಸುತ್ತಾರೆ. ಎಷ್ಟೇ ತುರ್ತು ಪರಿಸ್ಥಿತಿಯನ್ನು ಹೇಳಿದರೂ ಅದು ಇರಲಿ, ನಾನು ಹೇಳುವುದನ್ನು ಕೇಳಿ ಎನ್ನುತ್ತಾರೆ.

  ಈ ಮೂರು ಲಕ್ಷಣಗಳು ತೀವ್ರವಾಗಿದ್ದಲ್ಲಿ ಅದು ಚಿಕಿತ್ಸಿಸಲೇಬೇಕಾದ ಸ್ಕಿಜೋಫ್ರೀನಿಯಾ ಆಗಿದೆ.

  ಕಾರಣ ಮತ್ತು ಪರಿಹಾರಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ...
••••••••••••••••••••••••••••••••••••••••••••••
  ಇಂತಹ ಅನೇಕ ವಿಷಯಗಳ ಬಗ್ಗೆ ಆಳವಾದ ಮಾಹಿತಿ ಬೇಕಾದಲ್ಲಿ ಟೆಲಿಗ್ರಾಂ ಆ್ಯಪ್‌ನಲ್ಲಿರುವ 'ಆಸ್ಪತ್ರೆ‌ ರಹಿತ‌ ಜೀವನ' ಗುಂಪಿಗೆ ಸೇರಿದರೆ ಆರೋಗ್ಯ ಸಂರಕ್ಷಕ ಮಾಹಿತಿಗಳ ಸುಮಾರು 700+ ಸಂಚಿಕೆಗಳಿರುವುದನ್ನು ಗಮನಿಸಬಹುದು.

ಟೆಲಿಗ್ರಾಂ ಲಿಂಕ್: 
https://t.me/hospitalfreelife_kan

     🙏🏼 ಧನ್ಯವಾದಗಳು 🙏🏼
•••••••••••••••••••••••••••••••••••••••••••••• 
  ವಿಶ್ವ ಹೃದಯಾಶೀರ್ವಾದವಂ ಬಯಸಿ
  ~ಡಾ. ಮಲ್ಲಿಕಾರ್ಜುನ ಡಂಬಳ
  ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ, ಶಿವಮೊಗ್ಗ, ದಾವಣಗೆರೆ

ಬ್ಲಾಗ್ ಲಿಂಕ್:
https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು