ಮೆದುಳಿನ ಜೀವಕೋಶಗಳಿಗೆ ಬಾಧಕ ತರುವ ಜೀವನಶೈಲಿ -- {ಭಾಗ-3} 'ಪಾರ್ಕಿನ್ಸನ್ ಕಾಯಿಲೆ '

🍁  ಮೆದುಳಿನ ಜೀವಕೋಶಗಳಿಗೆ ಬಾಧಕ ತರುವ ಜೀವನಶೈಲಿ -- {ಭಾಗ-3} 'ಪಾರ್ಕಿನ್ಸನ್ ಕಾಯಿಲೆ '  🍁
••••••••••••••••••••••••••••••••••••••••••••••
  ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ
  ಸಂಚಿಕೆ: 741, ದಿನಾಂಕ: 03.06.2023
••••••••••••••••••••••••••••••••••••••••••••••
  ಪಾರ್ಕಿನ್ಸನ್ ಕಾಯಿಲೆ ಪೀಡಿತ ವ್ಯಕ್ತಿಯ ಕೈ ಅಥವಾ ಕಾಲು ಅಥವಾ ಎರಡೂ ಅನಿಯಂತ್ರಿತವಾಗಿ ಕಂಪಿಸುತ್ತಿರುತ್ತವೆ.

  ಈ ಕಂಪನ ತೀವ್ರವಾಗಿ, ಕೊನೆಗೆ ಶರೀರ ಸ್ಪಂದನ ರಹಿತವಾಗುತ್ತದೆ. 

  ಪಾರ್ಕಿನ್ಸನ್ ಕಾಯಿಲೆಯ ಕಾರಣ ಮತ್ತು ಚಿಕಿತ್ಸೆಗಳ ಬಗ್ಗೆ ಮಾಹಿತಿಯನ್ನು ಈಗ ನೋಡೋಣ..‌.

ನರಮಂಡಲದ ಪರಿಚಯ:
  ನಮ್ಮ ಚಟುವಟಿಕೆಗಳನ್ನು ಸದೃಢ ಮತ್ತು ಸುನಿಯಂತ್ರಿತವಾಗಿಡುವಲ್ಲಿ ನರಗಳ ಕೋಶಪೊರೆ ಮತ್ತು ನರತಂತುಗಳ ಪೊರೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ.

• ಬುದ್ಧಿಮಾಂದ್ಯತೆಯಲ್ಲಿ ವಿಕೃತ ಸ್ಪಂದನೆಯನ್ನು ನೋಡುತ್ತೇವೆ!
• ಪಾರ್ಕಿನ್ಸನ್ ಕಾಯಿಲೆ ಬಂದವರಲ್ಲಿ ಅತ್ಯಂತ ನಿಧಾನ ಗತಿಯ ಸ್ಪಂದನೆ ನೋಡುತ್ತೇವೆ!!
• ಸ್ಕಿಜೋಫ್ರೀನಿಯಾ (schizophrenia) ಕಾಯಿಲೆಯಲ್ಲಿ ತೀವ್ರಗತಿಯ, ಅನಿಯಂತ್ರಿತ ಸ್ಪಂದನೆಯನ್ನು ನೋಡುತ್ತೇವೆ!!!

  ಮೂರೂ ಸಂದರ್ಭಗಳಲ್ಲಿ 'ಕೋಶಪೊರೆ ' ಮತ್ತು 'ನರತಂತುಗಳ ಪೊರೆಯಾದ 'ಮೈಲಿನ್ ' ಗಳಲ್ಲಿ ವಿಕೃತಿ ಕಂಡುಬರುತ್ತದೆ.
••••••••••••••••••••••••••••••••••••••••••••••
  ಇವುಗಳಿಗೆ ಕಾರಣ ಮತ್ತು ಪರಿಹಾರಗಳನ್ನು ನೋಡೋಣ..‌.

  ನಮ್ಮ ಶರೀರ, ಮನಸ್ಸಿನ ಆಲೋಚನೆಗಳ ಆಣತಿಯಂತೆ ಮೆದುಳಿನಲ್ಲಿ ವಿಶಿಷ್ಟವಾದ ಮತ್ತು ಸೂಕ್ತ ಗುರಿಯನ್ನು ಹೊಂದಿರುವ ವಿದ್ಯುತ್ ತರಂಗಗಳು ಉತ್ಪತ್ತಿಯಾಗುತ್ತವೆ (ಇದು ಆಧುನಿಕ ವೈದ್ಯಪದ್ಧತಿಗೆ ಇನ್ನೂ ನಿಲುಕಿಲ್ಲ, ಮೆದುಳೇ ಸ್ವತಃ ಸೃಜಿಸುತ್ತದೆ ಅಥವಾ ಮನಸ್ಸು ಮೆದುಳಿನ ಆರೋಗ್ಯದ ಮೇಲೆ ಅವಲಂಬಿತವಾಗಿದೆ ಎಂದು ಅದು ಭಾವಿಸಿದೆ, ಹಾಗಾಗಿ ಚಿಕಿತ್ಸೆಯೂ ಅದೇ ರೀತಿಯಾಗಿದೆ).

  ಹೀಗೆ ಉಂಟಾದ ತರಂಗಗಳು ಮೆದುಳು ಮತ್ತು ನರತಂತುಗಳ ಮುಖಾಂತರ ಶರೀರಕ್ಕೆ ಹರಿದು ಸೂಕ್ತವಾದ ಕ್ರಿಯೆಯನ್ನು ಮಾಡುತ್ತಿರುತ್ತವೆ.

  ನಮ್ಮ ಮನಸ್ಸು ಜನ್ಮಾಂತರ ಸಂಸ್ಕಾರಗಳ ವಶಾತ್ ನಿರ್ದಿಷ್ಟ ಆಲೋಚನೆಗಳನ್ನು ನಿರಂತರ ಸೃಜಿಸುತ್ತಿರುತ್ತದೆ.

  ಮನಸ್ಸಿನ ಆಣತಿಯನ್ನು ಪಾಲಿಸುವಷ್ಟು, ನಿಯಂತ್ರಣ ಇಟ್ಟುಕೊಳ್ಳುವಷ್ಟು ಸಶಕ್ತ ನರಮಂಡಲ ಇದ್ದಲ್ಲಿ ಎಲ್ಲಾ ಸರಿಯಾಗಿರುತ್ತದೆ.

ಪಾರ್ಕಿನ್ಸನ್ ಕಾಯಿಲೆ:
  ಇದು ನರತಂತುಗಳ ಮೇಲೆ‌ ಇರುವ ಪೊರೆ(ಮೈಲಿನ್)ಯ‌ ದೌರ್ಬಲ್ಯ ಅಥವಾ ಸವೆತವಾಗಿದೆ.

ಏನಾಗಿರುತ್ತದೆ?:
  ನಮ್ಮ ಮನೋವೃತ್ತಿಗಳಿಂದ ಮೆದುಳು ಮತ್ತು ಇತರ ನರಗಳಲ್ಲಿ ಸೃಷ್ಟಿಸಲ್ಪಡುವ ವಿದ್ಯುತ್ ತರಂಗಗಳು ನಿರ್ದಿಷ್ಟ ದಿಕ್ಕಿನಲ್ಲಿ ಹರಿಯುತ್ತವೆ. ಇದೇ ರೀತಿಯ ವಿದ್ಯುತ್ ತರಂಗಗಳು ಇತರ ಜೀವಕೋಶಗಳಲ್ಲಿ ಉಂಟಾದರೂ ಸಹ ಅವುಗಳ ವೇಗ ಮತ್ತು ಅವು ಕ್ರಮಿಸುವ ದೂರ ಅತ್ಯಂತ ಸ್ವಲ್ಪ ಮಾತ್ರ, ಒಂದೆರಡು ಸೆಂಟಿಮೀಟರ್ ಕ್ರಮಿಸಿ ಶಾಂತವಾಗುತ್ತವೆ. ಅದೇ ನರತಂತುಗಳಲ್ಲಿ ಸೃಷ್ಟಿಯಾಗುವ ಆ ವಿದ್ಯುತ್ ತರಂಗಗಳು ಸುದೂರದವರೆಗೂ ಕ್ರಮಿಸುತ್ತವೆ, ಅಂದರೆ ಮೆದುಳಿನಿಂದ ಪಾದಗಳ ಬೆರಳುಗಳವರೆಗೆ ಒಂದೆರಡು ಕ್ಷಣದಲ್ಲಿ ವಿದ್ಯುತ್ ತರಂಗಗಳು ಹರಿದು ಸಂದೇಶಗಳನ್ನು ತಲುಪಿಸುತ್ತವೆ ಮತ್ತು ಅಲ್ಲಿಂದ ಮೆದುಳನ್ನು ತಲುಪಿಸುತ್ತವೆ.

  ಸಾಮಾನ್ಯ ಜೀವಕೋಶಗಳಲ್ಲಿ ಕೆಲ ಸೆಂಟಿಮೀಟರ್ ಕ್ರಮಿಸುವ ವಿದ್ಯುತ್ತು, ನರಗಳಲ್ಲಿ ಅದೇಕೆ ಅಷ್ಟು ದೂರ?! ಅದೇಕೆ ಅಷ್ಟು ವೇಗ?! ಎಂದರೆ, ನರತಂತುಗಳನ್ನು ಸುತ್ತುವರಿದ 'ಮೈಲಿನ್' ಪೊರೆಯು ಸೃಷ್ಟಿಯಾದ ವಿದ್ಯುತ್ತನ್ನು ಅತ್ತಿತ್ತ ಹರಿಯಲು ಬಿಡದೇ ನಿರ್ದಿಷ್ಟ ದಿಕ್ಕಿನಲ್ಲಿ ಹರಿಸುತ್ತದೆ ಮತ್ತು ಅಲ್ಲೇ ಕ್ಷೀಣಗೊಳ್ಳಲು ಬಿಡದೇ, ಮೂಲದಲ್ಲಿ ಉಂಟಾದ ಅದೇ ಬಲವನ್ನು ಕೊನೆಯ ತುದಿಯವರೆಗೆ ಉಳಿಸಿಕೊಂಡು ತಲುಪಲು ಸಹಾಯವಾಗುತ್ತದೆ!

  ಈ ನರತಂತುಗಳ ಪೊರೆಯ ಸಂರಕ್ಷಣೆಯಿಂದ ಮಾತ್ರ ನಮ್ಮ ನರಮಂಡಲ ಆರೋಗ್ಯಪೂರ್ಣ ಕ್ರಿಯೆಯಲ್ಲಿ ತೊಡಗಿರುತ್ತದೆ... 🤔

ಭಾದಕ ಜೀವನಶೈಲಿ:
  ಕಾಮಶೋಕಭಯಾತ್ ವಾಯುಃ, ಕ್ರೋಧಾತ್ ಪಿತ್ತಮ್|
ಅಂದರೆ -- 
• ಅತಿಯಾದ ಆಸೆ
• ಮುಂಗೋಪ
• ನಿದ್ದೆಗೆಡುವುದು
• ನರಗಳನ್ನು ಪ್ರಚೋದಿಸಿ ಶಕ್ತಿಯನ್ನು ಹಾಳು ಮಾಡುವ ಮನೋವ್ಯಸನಗಳು
• ಇನ್ನೊಬ್ಬರ ಗೆಲುವಿಗೆ ಸಂಕಟ ಪಡುವುದು
• ಹಗಲುಗನಸು, ಕೊರಗು
• ಭಯ
• ಕೆಲಸ ಮಾಡದೇ, ಯಶಸ್ಸಿನ‌ ಬಗೆಗೆ ಅತಿಯಾದ ಚಿಂತೆ.‌‌..

  ಇವುಗಳಿಂದ 'ಒಣಗಿಸುವ ಮತ್ತು ಕರಗಿಸುವ ಗುಣ'ವುಳ್ಳ ವಾತದೋಷ-ಪಿತ್ತದೋಷಗಳು ವರ್ಧಿಸುತ್ತವೆ.

  ಈ ಎರಡರ ಕಾರಣದಿಂದ 'ಮೈಲಿನ್' ಕರಗುತ್ತದೆ ಅಥವಾ ಒಣಗುತ್ತದೆ.'

  ಆಧುನಿಕ ಪದ್ಧತಿಯು ಇದಕ್ಕೆ ನಿರ್ದಿಷ್ಟ ಕಾರಣಗಳನ್ನು ಕಂಡುಕೊಂಡಿಲ್ಲ! ಆದರೆ ನಾವು ಚಿಕಿತ್ಸಿಸುತ್ತಿರುವ ಎಲ್ಲಾ ಪಾರ್ಕಿನ್ಸನ್ ರೋಗಿಗಳ ಇತಿಹಾಸ ಪಡೆಯುವಾಗ ಆಚಾರ್ಯರು ಹೇಳಿರುವ ಕಾರಣಗಳು ಖಂಡಿತಾ ಇರುತ್ತವೆ. ಹಾಗಾಗಿ ಈ ಮೇಲಿನ ಕಾರಣಗಳನ್ನು ಸ್ಪಷ್ಟವಾಗಿ ಗುರುತಿಸಿ ಹೇಳಬಹುದು.

ಚಿಕಿತ್ಸೆ:
  ಔಷಧಿಗಳಿಂದ ಈ ಪೊರೆಯನ್ನು ತುಂಬಿಸುವುದು ಕಷ್ಟಕರವಾದ್ದರಿಂದ, ವಿದ್ಯುತ್ ತರಂಗಗಳ ಬಲವನ್ನೇ ಕಡಿಮೆ ಮಾಡಿ, ಕೈಕಾಲುಗಳ ಮಾಂಸಖಂಡಗಳಲ್ಲಿ ಉಂಟಾಗುವ ಕಂಪನವನ್ನು ತಡೆಯಲು ನೋಡುತ್ತಾರೆ. ಆದರೆ ಇದನ್ನು ಯಾವ ಕಾರಣಕ್ಕೂ ಚಿಕಿತ್ಸೆ ಎನ್ನಬಾರದು, ಲಕ್ಷಣ ನಿಯಂತ್ರಣ ಅಷ್ಟೆ, ಆದ್ದರಿಂದಲೇ ಎಷ್ಟೇ ನಿಯಂತ್ರಿಸಿದರೂ ಕಾಯಿಲೆ ಮಾತ್ರ ಬೆಳೆಯುತ್ತಲೇ ಸಾಗುತ್ತದೆ..‌. 🙄

ನಿಜವಾದ ಚಿಕಿತ್ಸೆ ಏನು?:
  ರೋಗ ಬಾಧಿಸುವ ಮೊದಲೇ --  
• ಮನಸ್ಸನ್ನು ವಿಶಾಲಗೊಳಿಸುವುದು
• ಪರದ್ವೇಷದಿಂದ ಮುಕ್ತರಾಗುವುದು

• ಅತ್ಯಾಸೆಗೆ ತಕ್ಕ ಶ್ರಮ ಹಾಕುವುದು ಅಥವಾ ಅದನ್ನು ಕೈಬಿಟ್ಟು ನೆಮ್ಮದಿಯಿಂದ ಇರುವುದು
• ಒಂದು ವಿಷಯದಲ್ಲಿ ಅತಿಯಾಗಿ ಕೊರಗುವುದನ್ನು ನಿಲ್ಲಿಸುವುದು
• ಎಲ್ಲರ ಹಿತಕ್ಕಾಗಿ ಜೀವನ ಮಾಡಲು ಆರಂಭಿಸುವುದು...
  ನರತಂತುಗಳ ಪೊರೆಯಲ್ಲಿ ಸತ್ವ ಸಂಚಯವಾಗಿ, ಹರಿಯುವ ರಜೋಪ್ರಧಾನ ವಿದ್ಯುತ್ತನ್ನು ಅಥವಾ ಅದರ ಶಕ್ತಿಯನ್ನು ತಡೆದುಕೊಂಡು ಆ ತರಂಗಗಳನ್ನು ನಿರ್ದಿಷ್ಟ ವೇಗದಲ್ಲಿ, ನಿರ್ದಿಷ್ಟ ಗುರಿಯೆಡೆಗೆ ಸಾಗಿಸುತ್ತವೆ. 🤔

ರೋಗ ಆರಂಭವಾಗುವ ಮೊದಲೇ ಚಿಕಿತ್ಸೆ ಏಕೆ?:
  ಮೆದುಳು ಮತ್ತು ನರತಂತುಗಳು ಆಘಾತಗೊಂಡ ನಂತರ ಮನಸ್ಸನ್ನು ನಿಯಂತ್ರಿಸಿ, ಸರಿದಾರಿಯಲ್ಲಿ ಸಾಗಿಸುವುದು ಅತ್ಯಂತ ಕಠಿಣ, ಪ್ರಯತ್ನ ಪಟ್ಟರೂ ಮನಸ್ಸು ಅದಾಗಲೇ ಬೆಳೆಸಿಕೊಂಡ ದುರ್ಬುದ್ಧಿಯಿಂದ ಹೊರಬರದೇ ಮತ್ತೆ ಮತ್ತೆ ನರಗಳ ಮೇಲಿನ ಪೊರೆ ಕರಗುವಂತೆ ಮಾಡುತ್ತದೆ.

  ಹಾಗಾಗಿ, ಎಲ್ಲರೂ ನರಗಳನ್ನು ಸದೃಢವಾಗಿಟ್ಟುಕೊಳ್ಳಲು ಮೇಲಿನ ಹಿತಕರ ಆಚರಣೆಗಳನ್ನು ತಕ್ಷಣದಿಂದ ರೂಢಿಗೆ ತಂದುಕೊಳ್ಳುವುದು ಅವಶ್ಯಕ.

ಔಷಧಿಗಳು:
  ಆಯುರ್ವೇದ ಔಷಧಿಗಳು ಖಂಡಿತ ಸಹಾಯ ಮಾಡುತ್ತವೆ. ದೀರ್ಘಕಾಲದ ಔಷಧಿ ಚಿಕಿತ್ಸೆ, ಪಂಚಕರ್ಮ ಪದ್ಧತಿ ಮತ್ತು ಉಪಕರ್ಮಗಳು ಅತ್ಯಂತ ಪರಿಣಾಮ ಬೀರುತ್ತವೆ.
••••••••••••••••••••••••••••••••••••••••••••••
  ಸೂಚಿತ ಈ ಪರಿಹಾರಗಳ ಬಗ್ಗೆ ಆಳವಾದ ಮಾಹಿತಿ ಬೇಕಾದಲ್ಲಿ ಟೆಲಿಗ್ರಾಂ ಆ್ಯಪ್‌ನಲ್ಲಿರುವ 'ಆಸ್ಪತ್ರೆ‌ ರಹಿತ‌ ಜೀವನ' ಗುಂಪಿಗೆ ಸೇರಿದರೆ ಆರೋಗ್ಯ ಸಂರಕ್ಷಕ ಮಾಹಿತಿಗಳ ಸುಮಾರು 700+ ಸಂಚಿಕೆಗಳಿರುವುದನ್ನು ಗಮನಿಸಬಹುದು.

ಟೆಲಿಗ್ರಾಂ ಲಿಂಕ್:
https://t.me/hospitalfreelife_kan

     🙏🏼   ಧನ್ಯವಾದಗಳು   🙏🏼
•••••••••••••••••••••••••••••••••••••••••••••• 
  ವಿಶ್ವ ಹೃದಯಾಶೀರ್ವಾದವಂ ಬಯಸಿ
  ~ಡಾ. ಮಲ್ಲಿಕಾರ್ಜುನ ಡಂಬಳ
  ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ; ಶಿವಮೊಗ್ಗ, ದಾವಣಗೆರೆ

ಬ್ಲಾಗ್ ಲಿಂಕ್:
https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು