ಈ ಹಸಿರೆಲೆ ಚಟ್ನಿಗಳಿಂದಲೇ ಮೂಳೆ ಸವೆತ ತಡೆಯಬಹುದು!

🙏🏼   ಅಮೃತಾತ್ಮರೇ, ನಮಸ್ಕಾರ   🙏🏼

  🍁 ಈ ಹಸಿರೆಲೆ ಚಟ್ನಿಗಳಿಂದಲೇ ಮೂಳೆ ಸವೆತ ತಡೆಯಬಹುದು! 🍁
•••••••••••••••••••••••••••••••••••••••••••••
  ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ
  ಸಂಚಿಕೆ: 748, ದಿನಾಂಕ: 28.08.2023
•••••••••••••••••••••••••••••••••••••••••••••
  ಔಷಧೀಯ ಗುಣಗಳಿರುವ ಕೆಲವು ಹಸಿ ಎಲೆ, ಕೆಲ ಕಾಂಡಗಳಿಂದ ಮನೆಯಲ್ಲಿ ತಯಾರಿಸುವ ಸರಳ ಚಟ್ನಿಗಳಿಂದಲೇ ಮೂಳೆ ಸವೆತ ತಡೆಯಬಹುದು!

  ಕೇವಲ ಮೂಳೆ ಸವೆತ ಮಾತ್ರವಲ್ಲ, ಎಲ್ಲಾ ರೀತಿಯ ಕಾಯಿಲೆಗಳನ್ನು ತಡೆಯಲು ವಿವಿಧ ಔಷಧೀಯ ಶಕ್ತಿಯುಳ್ಳ ಆಹಾರ ತಯಾರಿಕೆಯು ನಿತ್ಯವೂ ಎಲ್ಲಾ ಮನೆಗಳಲ್ಲಿ ನಡೆಯಬೇಕು.

ಮೂಳೆ ಸವೆತ ತಡೆಯುವ ಮುಂಗರವಳ್ಳಿ ಚಟ್ನಿ

  ಅಸ್ಥಿಶೃಂಖಲಾ ಎನ್ನುವ ಸಂಸ್ಕೃತ ನಾಮಧೇಯದ ಈ ಸಸ್ಯದ ಸಸ್ಯಶಾಸ್ತ್ರೀಯ ಹೆಸರು cissus quadrangularis

  ಇದು ಮೂಳೆಗೆ ಮಾತ್ರ ಶಕ್ತಿ ತುಂಬುವುದು, ಅದಕ್ಕೆ ಕಾರಣ ಅದರೊಳಗಿನ ಕ್ಯಾಲ್ಸಿಯಂ ಎಂದು ತಪ್ಪು ಗ್ರಹಿಕೆ ಮಾಡಿಕೊಳ್ಳಬೇಡಿ.

  ಇದರ ವಿಶೇಷ ಗುಣ ಸಂಧಾನಕರ ಅಂದರೆ ಒಂದನ್ನೊಂದು ಜೋಡಣೆ ಮಾಡುವುದು, ಇದು ಕೃತಕ ಜೋಡಣೆ ಅಲ್ಲ, ಒತ್ತಾಯದ ಜೋಡಣೆ ಅಲ್ಲ, ಪ್ರತಿ ಜೀವಕೋಶಗಳ ನಡುವೆ ಸಹಜವಾಗಿ ಇರಬೇಕಾದ ಸ್ನೇಹ ಜೋಡಣೆ ಇದನ್ನು ನಮ್ಮ ಜೀವನಶೈಲಿ ಬದಲಾವಣೆಯಿಂದ 'ಧಾತುಸ್ನೇಹ ಪರಂಪರೆ ' ಎಂಬ ಮಹೋನ್ನತ ಸಂಬಂಧವನ್ನು ಹಾಳು ಮಾಡಿಕೊಂಡದ್ದನ್ನು ಮರುಸ್ಥಾಪನೆ ಮಾಡುವ ಈ ಅಸ್ಥಿಶೃಂಖಲಾ ಎಂಬ ಗಿಡಮೂಲಿಕೆ ತನ್ನ ಸಂಧಾನಕರ ಗುಣದ ಕಾರಣ ಹೃದಯದ, ಗರ್ಭಕೋಶದ, ಶ್ವಾಸಕೋಶದ, ಯಕೃತ್ತಿನ, ಪ್ಯಾಂಕ್ರಿಯಾಸ್, ತ್ವಚೆ... ಇವುಗಳ ಜೀವಕೋಶಗಳ ನಡುವಿನ ಜೀವಚೈತನ್ಯದ  ಬೆಸೆಯುವ ಕಾರಣ --

  ಹೃದ್ರೋಗ, ಋತು ಸಮಯದ ತೀವ್ರನೋವು, ಅಲರ್ಜಿ-ಅಸ್ತಮಾ, ಹೆಚ್ಚಿದ ಕೊಬ್ಬು, ಮಧುಮೇಹ, ಚಿರಕಾಲೀನ ಗಾಯಗಳು, ಅಲ್ಸರ್‌ಗಳು, ಕ್ಯಾನ್ಸರ್.... ಮುಂತಾದವುಗಳನ್ನು ತಡೆಯುವುದು;

  ಮತ್ತು ಈಗಾಗಲೇ ಉಂಟಾದ ವ್ಯಾಧಿಗಳನ್ನು ನಿಯಂತ್ರಿಸುವುದು ಮತ್ತು ಕೆಲವರಲ್ಲಿ ಇವುಗಳನ್ನು ವಾಸಿ ಮಾಡುವುದು ಸಹ...

ಕಡ್ಡಾಯ ಸೂಚನೆಗಳು:

  1. ನಿಮ್ಮ ಶರೀರಕ್ಕೆ, ರುಚಿಗೆ ಒಗ್ಗುವ ರೀತಿಯಲ್ಲಿ ಚಟ್ನಿ ಮಾಡಿಕೊಳ್ಳಿ, ಆದರೆ, ಹೆಸರಿಗಷ್ಟೇ ಅಸ್ಥಿಶೃಂಖಲಾ ಬಳಸಿ, ನಿಮಗೆ ಬೇಕಾದಂತೆ ಮಸಾಲೆ, ಉಪ್ಪು, ಹುಳಿ ಖಾರಗಳನ್ನು ಯಥೇಚ್ಛ ಸೇರಿಕೊಂಡು ಬಳಸಿದರೆ, ಯಾವ ಲಾಭವು ಇಲ್ಲ (ಮಧುಮೇಹಿಗಳು ಹಾಗಲಕಾಯಿ ಚಿಪ್ಸ್ ತಿಂದಂತೆ ಅಪಾಯಕಾರಿ!).

  2. ಅಸ್ಥಿಶೃಂಖಲಾ ಕಡ್ಡಾಯವಾಗಿ ಎಳೆಯದಾಗಿರಬೇಕು ಮತ್ತು ಚಟ್ನಿ ತಯಾರಿಸುವ ಮುನ್ನ ಅದನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿಯಬೇಕು.

  3. ಏನು ತಿಂದರೆ ಏನು ಸಿಗುತ್ತದೆ ಎಂಬುದು ಅಪ್ರಾಕೃತಿಕ ಕೇವಲ ಲೆಕ್ಕಾಚಾರ, ಏನನ್ನು ಜೀರ್ಣಿಸಿಕೊಂಡರೆ ಏನು ಸಿಗುತ್ತದೆ ಎಂಬುದು ಮಾತ್ರ ಸತ್ಯ, ಜೀರ್ಣವಾಗುವಷ್ಟು ಪ್ರಮಾಣದಲ್ಲಿ ಮಾತ್ರ ಸೇವಿಸಿ.

  ಆಹಾರ-ವಿಹಾರ ಸರಿಪಡಿಸಿಕೊಳ್ಳೋಣ, ಆರೋಗ್ಯದಿಂದ ಇರೋಣ
•••••••••••••••••••••••••••••••••••••••••••••
  'ಆಸ್ಪತ್ರೆ‌ ರಹಿತ‌ ಜೀವನ' ಗುಂಪಿನ ಹಿಂದಿನ 700+ ಸಂಚಿಕೆಗಳು ಟೆಲಿಗ್ರಾಂ ಆ್ಯಪ್‌ನಲ್ಲಿ ಮಾತ್ರ ಕಾಣಸಿಗುತ್ತವೆ.

  ಆಸಕ್ತರು ಲಿಂಕ್ ಬಳಸಿ ಟೆಲಿಗ್ರಾಂ ಗುಂಪಿಗೆ ಸೇರಬಹುದು:
https://t.me/hospitalfreelife_kan

        🙏🏼  ಧನ್ಯವಾದಗಳು  🙏🏼
•••••••••••••••••••••••••••••••••••••••••••••
  ವಿಶ್ವ ಹೃದಯಾಶೀರ್ವಾದವಂ ಬಯಸಿ
  ~ಡಾ. ಮಲ್ಲಿಕಾರ್ಜುನ ಡಂಬಳ
  ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ; ಶಿವಮೊಗ್ಗ, ದಾವಣಗೆರೆ

ಬ್ಲಾಗ್ ಲಿಂಕ್:
https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು