ಕಿಡ್ನಿ ರಕ್ಷಕ ಆಯುರ್‌ವೈಜ್ಞಾನಿಕ ಸತ್ಯಸಂಗತಿಗಳು

ಕಿಡ್ನಿ ರಕ್ಷಕ ಆಯುರ್‌ವೈಜ್ಞಾನಿಕ ಸತ್ಯಸಂಗತಿಗಳು
 •••••••••••••••••••• 
ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ 
ಸಂಚಿಕೆ: 733
29.04.2023
••••••••••••••••••••
ನಿಮ್ಮ ಕಿಡ್ನಿ ಸರಿಯಾಗಿ ಕೆಲಸ ಮಾಡಲು ಬೇಕಾದ ಆಯುರ್‌ವೈಜ್ಞಾನಿಕ ವಿವರಗಳು-
(ಇವೆಲ್ಲಾ ನಿಮ್ಮ ಅನುಭವಕ್ಕೆ ಬರುವ ಅಂಗತಿಗಳಾಗಿವೆ ಸೂಕ್ಷ್ಮವಾಗಿ ಗಮನಿಸಿ ನೋಡಿ)

1.
ಅತಿ ಪ್ರಮಾಣದ ಆಹಾರ ಸೇವನೆ ಕಿಡ್ನಿ ಫೇಲ್ಯೂರ್‌ನ ಮೊಟ್ಟ ಮೊದಲ ಕಾರಣ.
ನಿಮ್ಮ ಹಸಿವನ್ನು ತುಂಬಿಸಿ, ಹೊಟ್ಟೆ ತುಂಬಿಸಬೇಡಿ.
ಬಾಲ್ಯದಿಂದಲೂ ಇರುವ ಈ ಅಭ್ಯಾಸ, ವ್ಯಕ್ತಿಯ 45 ವರ್ಷಗಳ ನಂತರ ತೊಂದರೆ ಕೊಡಲು ಆರಂಭಿಸುತ್ತದೆ. ಅತಿ ಪ್ರಮಾಣದ ಶಕ್ತಿ ಸಂಗ್ರಹವನ್ನು ಹೊರಹಾಕಲು ಮಾಂಸಖಂಡಗಳಲ್ಲಿ ಪಿತ್ತ(ಹೀಟ್) ಉತ್ಪತ್ತಿ ಯಾಗಿ, ಅದರೊಳಗಿನ ಪ್ರೋಟೀನ್ ಕರಗಿ, ಕಿಡ್ನಿ ಮುಖಾಂತರ ಹೊರಹೋಗಲು ಪ್ರಾರಂಭಿಸುತ್ತದೆ.‌ ಇದು ಕಿಡ್ನಿ ತೊಂದರೆಯ ಬಹುದೊಡ್ಡ ಕಾರಣ.

2.
ಮೇಲಿನ ಕಾರಣದಿಂದ ಮಾಂಸಧಾತು ಪಾಕವಾದಾಗ(ಬೆಂದು ಹೋಗುತ್ತಿರುವಾಗ) ಲಸಿಕಾ ಉತ್ಪತ್ತಿಯಾಗುತ್ತದೆ.

ಪಿತ್ತೇನ ಪಚಿತಂ ಮಾಂಸಾತ್ ಸ್ರಾವಾದ್ ಉದಕಂ ಲಸಿಕಾ ಇತ್ಯುಚ್ಚತೇ ||

ಈ 'ಲಸಿಕಾ' ಎಂಬುದು ಕ್ರಮೇಣ ವಿಷರೂಪವಾಗುತ್ತದೆ ಆದ್ದರಿಂದ, ಅಂತಹ ವಿಷವನ್ನು ಸೋಸಲು ಪ್ರಯತ್ನ ಪಡುವ ಕಿಡ್ನಿಗಳು ಶೀಘ್ರವಾಗಿ ಕೆಟ್ಟುಹೋಗುತ್ತವೆ.
ಇದನ್ನು ರಿಪೇರಿ ಮಾಡಲು ಔಷಧಿಗಳೇ ಇಲ್ಲ.
(ಗಮನಿಸಿ: ದೇಹದಲ್ಲಿ ಸುಟ್ಟ ಗಾಯಗಳ ತೀವ್ರತೆ 70% ದಾಟಿದರೆ ವ್ಯಕ್ತಿ ಬದುಕಿ ಉಳಿಯಲಾರ, ಅದಕ್ಕೆ ಕಾರಣ ಚರ್ಮ ಮತ್ತು ಮಾಂಸ ಬೆಂದು ಲಸಿಕಾ ಎಂಬ ವಿಷ ಉತ್ಪತ್ತಿಯಾಗುವುದೇ ಆಗಿದೆ.) 

3.
ಅತಿಯಾದ ಪ್ರೋಟೀನ್ ಮತ್ತು ಕೊಬ್ಬು ರಹಿತ ಕೇವಲ ಪ್ರೋಟೀನ್ ಸೇವನೆಯು, ನೇರವಾಗಿ ಯುರಿಕ್ ಆಮ್ಲವನ್ನು ಹೆಚ್ಚಿಸಿ, ಕಾಲಕ್ರಮೇಣ ರಕ್ತನಾಳಗಳನ್ನು ಗಡುಸಾಗಿಸುತ್ತದೆ. ಈ ಗಡುಸು ರಕ್ತನಾಳಗಳು ಕಿಡ್ನಿಯಲ್ಲಿ ವಿಷ ಸೋಸುವ ಸಾಮರ್ಥ್ಯ ಕಳೆದುಕೊಂಡು ಕಿಡ್ನಿ ಹಾಳಾಗುತ್ತವೆ.
(ಇದು ಆಧುನಕ ವಿಜ್ಞಾನಕ್ಕೆ ಗೊತ್ತಿದ್ದೂ ಸಹ, ಕೊಲೆಸ್ಟರಾಲ್‌ ಮೇಲೆ ಶತ್ರುತ್ವವನ್ನೂ ಮತ್ತು ಪ್ರೋಟೀನ್ ಮಿತ್ರತ್ವವನ್ನು ಜನಮಾನಸದಲ್ಲಿ ಹೇಗೆ / ಏಕೆ ಉಳಿಸಿದ್ದಾರೋ ಆಶ್ಚರ್ಯ!) 

4
ವೈದ್ಯಕೀಯ ಮಾಹಿತಿಯನ್ನು ನಂಬಿ, ದೇಹದ ಅಗತ್ಯವನ್ನೂ ಮೀರಿ ನೀರು ಸೇವಿಸುವುದರಿಂದ, ಆಹಾರ ಜೀರ್ಣಮಾಡುವ ಕಿಣ್ವಗಳು ನಿಸ್ಸಾರವಾಗಿ(ಡೈಲ್ಯೂಟ್) ಪೋಷಕಾಂಶಗಳು ವಿಭಜನೆಯಾಗದೇ ರಕ್ತ ಮಾಂಸಾದಿಗಳಲ್ಲಿ ಶೇಖರಣೆಯಾಗುತ್ತವೆ.
ಅವಿಭಜಿತ ಪೋಷಕ ಕಣಗಳು ನೇರ ವಿಷಗಳೇ ಆಗುವ ಕಾರಣ, ಆ ಕಣಗಳ ನಿರ್ವಹಣೆಯಲ್ಲಿ ಯಕೃತ್ತು ಮತ್ತು ಕಿಡ್ನಿ ಎರಡೂ ಸೋತುಹೋಗುತ್ತವೆ.

5
ಅಲ್ಕೋಹಾಲ್ ಮತ್ತು ಅದರ ರೆಸಿಡಿವ್ಯು(ಉಳಿಕೆ), ಯಕೃತ್ತು ಮತ್ತು ಕಿಡ್ನಿಗಳನ್ನು ಕಾಲಾಂತರದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಕೆಡಿಸಿಬಿಡುತ್ತವೆ.
ಇಂದಿನ ಹೆಚ್ಚುತ್ತಿರುವ ಫ್ಯಾಟೀ ಲಿವರ್ ಮತ್ತು ಕಿಡ್ನಿ ಫೇಲ್ಯೂರ್‌ಗಳ ನೇರ ಕಾರಣವೇ ಇಂದು ನಾವು ನಿತ್ಯವೂ ಸೇವಿಸುತ್ತಿರುವ ಅಲ್ಕೊಹಾಲ್ ರೆಸಿಡಿವ್ಯು ಎಂಬ ದೋಸೆ, ಇಡ್ಲಿ ಹಿಟ್ಟುಗಳು!?
ಸೂಕ್ಷ್ಮವಾಗಿ ಗಮನಿಸಿ ನೋಡಿ ಆಶ್ಚರ್ಯವಾದರೂ ಇದು ಸತ್ಯ. 
ಕೆಲವರು ಈ ದಿನದ ಹಿಟ್ಟನ್ನು ಒಂದು ವಾರ ಬಳಸುತ್ತಾರೆ!

6
ಆರ್.ಓ.ಜಲ ಸೇವನೆಯಿಂದ ಮೂಳೆಗಳಲ್ಲಿ ಖನಿಜಗಳು ಕರಗಿ ನಿತ್ಯವೂ ವಾಸನೆಯುಕ್ತ ಮೂತ್ರದ ರೂಪದಲ್ಲಿ ಹೊರಹೋಗುತ್ತವೆ. ಕಾಲಕ್ರಮೇಣ ಎರಡೂ ಕಿಡ್ನಿಗಳು ಸೋತುಹೋಗುತ್ತವೆ.

7
ಹೊಟೆಲ್‌ಗಳ, ಪಿ.ಜಿ.ಗಳ, ಮದುವೆ ಮುಂತಾದ ಕಾರ್ಯಗಳಲ್ಲಿ ಆಹಾರ ಬೇಗ ಕೆಡಬಾರದೆಂದು ಕಡಿಮೆ ನೀರಲ್ಲಿ ತಯಾರಿಸುವ ಊಟವು, ಅರ್ಧ ಬೆಂದು ಉದುರಾಗಿರುತ್ತದೆ. (ಕೆಲವರು ಮನೆಯಲ್ಲಿಯೂ ಉದುರಾದ ಆಹಾರ ಸೇವಿಸುತ್ತಾರೆ!)
ಇದು ಕಾಲಕ್ರಮದಲ್ಲಿ ಶರೀರದ ಜೀವಕೋಶಗಳನ್ನು ನಿರ್ಜಲೀಕರಣಗೊಳಿಸಿ, ಜೀವಕೋಶಗಳ ರಸ ಕ್ಷೀಣಿಸಿ ಕಿಡ್ನಿಗಳ ಮೇಲೆ ಒತ್ತಡ ಬೀಳುತ್ತದೆ, ಇದೂ ಸಹ ಬಹು ಹತ್ತಿರದ ಕಾರಣವಾಗಿದೆ.
(ಉದುರಾದ ಆಹಾರ ಸೇವಿಸಿದರೂ ನಾನು ಹೆಚ್ಚು ನೀರು ಕುಡಿಯುತ್ತೇನೆ ಎನ್ನುವವರೇ ಎಚ್ಚರ- ಅಕ್ಕಿ ತಿಂದು ಬಿಸಿ ನೀರು ಕುಡಿದರೂ ಒಳಗೆ ಅನ್ನವಾಗುವುದಿಲ್ಲ ಅಲ್ಲವೇ?)

8
ಅತಿಯಾದ ಹುಳಿ ಸೇವನೆ ಮತ್ತು ಶಕ್ತಿ ಇರುತ್ತದೆ ಎಂಬ ಕಾರಣದಿಂದ ಜೀರ್ಣಕ್ಕೆ ಕಷ್ಟವಾಗುವ ಆಹಾರಗಳ ಸೇವನೆಯಿಂದ ಪೋಷಕಾಂಶಗಳನ್ನು ವಿಭಜಿಸಲು ರಕ್ತವು ಆಮ್ಲೀಯತೆಯನ್ನು ಉಂಟುಮಾಡುತ್ತದೆ. ಆರಂಭದಲ್ಲಿ ಇದು ಅನಿಯಂತ್ರಿತ ಗ್ಯಾಸ್‌ಟ್ರೈಟಿಸ್ ರೂಪದಲ್ಲಿಯೂ ಕಾಲ ಕ್ರಮೇಣ ಯಕೃತ್ತಿನ ಮೇಲೆ ಮತ್ತು ಮಜ್ಜೆಯ ಮೇಲೆ ಪ್ರಭಾವ ಬೀರಿ ಕಿಡ್ನಿಗಳನ್ನು ಹಾಳು ಮಾಡುತ್ತದೆ.

9
ನಿದ್ರಾಹೀನತೆ, ಅಕಾಲದಲ್ಲಿ ನಿದ್ರೆ ಮಾಡುವವರು ಕಡಿಮೆ ಪ್ರಮಾಣದ ಅಥವಾ ಅಲ್ಪ ಶಕ್ತಿ ಇರುವ ಆಹಾರ ಸೇವಿಸುವುದು ಒಳಿತು.
ಹೆಚ್ಚು ಪ್ರಮಾಣದ ಅಥವಾ ಅತ್ಯಂತ ಶಕ್ತಿಯುತ ಆಹಾರ ಸೇವಿಸಿದರೆ ಅದು ಅನಿದ್ರೆಯ ಕಾರಣ ಜೀರ್ಣವಾಗದೇ ಸಂಚಯವಾಗುವ ಪೋಷಕಾಂಶಗಳು ವಿಷರೂಪಕ್ಕೆ ತಿರುಗುತ್ತವೆ. ಇದರಿಂದಲೂ ಕಿಡ್ನಿ ಫೇಲ್ಯೂರ್ ಆಗುತ್ತದೆ.
ಪರಿಹಾರ:
ಚಿಂತೆ ರಹಿತ ನಿದ್ರೆಯು ಅತ್ಯಂತ ಶ್ರೇಷ್ಠ ಚಿಕಿತ್ಸೆ.

10
ಹಣ್ಣುಗಳನ್ನು ಆರೋಗ್ಯಕರ ಎಂದು, ರಸಾಯನಿಕಗಳಿಂದಲೇ ಬೆಳೆಯುವ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ ರಾಸಾಯನಿಕಗಳ, ಕೀಟನಾಶಕಗಳ ಪ್ರಮಾಣ ಹೆಚ್ಚುತ್ತಾ ಕಿಡ್ನಿ ಫೇಲ್ಯೂರ್ ಆಗುತ್ತವೆ.
ಪರಿಹಾರ: ನಿಮ್ಮ ಮನೆಯ ಮುಂದೆ, ಹೊಲದಲ್ಲಿ ಸಹಜವಾಗಿ ಬೆಳೆದಿರುವ ಹಣ್ಣುಗಳನ್ನು ಸೇವಿಸಿ, ವಾಣಿಜ್ಯ ಬೆಳೆಗಳು ಬೇಡ.

ಶಾಶ್ವತ ಪರಿಹಾರ:
ಅತ್ಯಂತ ಪ್ರಮುಖ ವಿಚಾರ ಎಂದರೆ,
ಜೀವನವನ್ನು ರಾಸಾಯನಿಕಗಳಿಂದ ಮುಕ್ತಗೊಳಿಸಿ ಮತ್ತು ಮನಸ್ಸನ್ನು ಹಗುರವಾಗಿ ಇಟ್ಟುಕೊಳ್ಳಿ.

ಸಾವಯವ ಪದ್ಧತಿಯ ಅಥವಾ ನೈಸರ್ಗಿಕ ಕೃಷಿ ಆಧಾರಿತ ಆಹಾರ ಧಾನ್ಯ, ತರಕಾರಿ, ಹಣ್ಣುಗಳನ್ನೇ ಬಳಸಿ, ಅವು ದುಬಾರಿಯಲ್ಲ, ನಿಮ್ಮ ಆಸ್ಪತ್ರೆಯ ಖರ್ಚನ್ನು, ರೋಗಗಳ ನೋವನ್ನೂ ಇಲ್ಲದಂತೆ ಮಾಡುತ್ತವೆ.
ಕೃಷಿ ತರಬೇತಿಗಾಗಿ, ತರಕಾರಿ ಹಣ್ಣುಗಳನ್ನು ಮನೆಯಲ್ಲಿಯೇ ಬೆಳೆಯಲು ತರಬೇತಿ ಪಡೆಯಲು ಹಾಗೆಯೇ ನೈಸರ್ಗಿಕ ಧಾನ್ಯಗಳಿಗಾಗಿಯೂ ಸಂಪರ್ಕಿಸಿ
8792290274

ಧನ್ಯವಾದಗಳು
••••••••••••••••••••  ವಿಶ್ವಹೃದಯಾಶೀರ್ವಾದವಂ ಬಯಸಿ ಡಾ.ಮಲ್ಲಿಕಾರ್ಜುನ ಡಂಬಳ ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ

ಬ್ಲಾಗ್ ಲಿಂಕ್:
https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು