ಹಣೆಬರಹ ದೊಡ್ಡದೇ ನಮ್ಮ ಪ್ರಯತ್ನ ದೊಡ್ಡದೇ? ಭಾಗ-1

ಹಣೆಬರಹ ದೊಡ್ಡದೇ ನಮ್ಮ ಪ್ರಯತ್ನ ದೊಡ್ಡದೇ?
 •••••••••••••••••••• 
ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ 
ಸಂಚಿಕೆ: 737
20.05.2023
••••••••••••••••••••
ನಮ್ಮ ಮೆದುಳಿಗಿಂತ ಹೆಚ್ಚು ಸಾಮರ್ಥ್ಯವುಳ್ಳದ್ದು ಮನಸ್ಸು

ಮೆದುಳು ಸುಮಾರು 500 ಟ್ರಿಲಿಯನ್(5×10¹⁴) ಸಂದೇಶಗಳನ್ನು ತನ್ನ ಸಂಕೀರ್ಣ ಜಾಲದಿಂದ ನಿರಂತರ ಕಳಿಸುತ್ತಿರುತ್ತದೆ. ಯಾವ ಸಂದೇಶ ಯಾವ ನರತಂತುಗಳ ಮೂಲಕ ಯಾವ ಜೀವಕೋಶವನ್ನು ಸೇರುತ್ತದೆ ಎಂದು ತಿಳಿಯುವುದು ವಿಜ್ಞಾನಕ್ಕೆ ಇದುವರೆಗೆ ಅಸಾಧ್ಯವೆನಿಸಿದೆ.
ಮತ್ತು
ಇದನ್ನು ಬುದ್ಧಿಯಿಂದಲೇ ಪೂರ್ಣವಾಗಿ ತಿಳಿಯುವುದೂ ಸಹ ಅಸಾಧ್ಯ.

• ಪ್ರತಿ ಜೀವಕೋಶಗಳು ತಮ್ಮ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಈ ಮೆದುಳನ್ನು ಕೂಲಿಕಾರ್ಮಿಕನಂತೆ ಬಳಸಿಕೊಳ್ಳುತ್ತವೆ. 
• ಆದರೆ ಮೆದುಳು ಸಾಮಾನ್ಯ ಕೂಲಿಯವನಲ್ಲ, ತಮ್ಮ ಸಂಸ್ಥೆಯ ಮುಖ್ಯಸ್ಥನಂತೆ (ಸಿ.ಇ.ಒ) ನಂತೆ, ಯಾವಾಗಲೂ ಇಡೀ ಸಂಸ್ಥೆಯ ಆರೋಗ್ಯಕರ ಬೆಳವಣಿಗೆಯ ದೃಷ್ಟಿಯಿಂದ ಎಲ್ಲಾ ಜೀವಕೋಶಗಳನ್ನೂ ನಿಯಂತ್ರಿಸಬಲ್ಲ.
• ಮೆದುಳು, ನರವ್ಯೂಹ ಮತ್ತು ಜೀವಕೋಶಗಳು ಸದಾ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಣೆಯಲ್ಲಿ ಇರುತ್ತವೆ.

• ಬುದ್ಧಿಯನ್ನು ಮೀರಿದ ಒಂದು ಅಂಶ ಈ ಎಲ್ಲಾ ಸಂವೇದನೆಗಳನ್ನು ಸೃಜಿಸುತ್ತಿದೆ ಮತ್ತು ಸದಾ ಪರಸ್ಪರ ಪೂರಕತೆಯನ್ನು ಇಟ್ಟಿದೆ, ಇದೇ ಕಾರಣದಿಂದ 'ಜೀವನ' ಎಂಬುದು ಇದೆ.
•••••

ಈ ಎಲ್ಲವನ್ನೂ ಸೃಜಿಸುವ ಆ ಶಕ್ತಿಯೇ 'ಮನಸ್ಸು'. ಅದು ತನ್ನ ಅಸಾಧಾರಣ ಸಾಮರ್ಥ್ಯದಿಂದ ಈ ದೇಹದ ಮೆದುಳನ್ನೂ ಸೇರಿಕೊಂಡು ಎಲ್ಲಾ ಜೀವಕೋಶಗಳ ರೂಪ, ಕ್ರಿಯೆ, ಆಯುಷ್ಯವನ್ನೂ ನಿರ್ಧರಿಸಿ ಅದರಂತೆ, ಪ್ರೋಗ್ರಾಂ ಬರೆದು ಪರಸ್ಪರ ಪೂರಕತೆಯನ್ನು ಇಟ್ಟಿದೆ.
ಇದನ್ನೇ ಆಡುಭಾಷೆಯಲ್ಲಿ ಹಣೆಬರಹ ಎಂದು ಕರೆಯುತ್ತಾರೆ.
ಹಾಗಾದರೆ, 
ಮನಸ್ಸಿಗೆ ಈ ಅಸಾಧಾರಣ ಸಾಮರ್ಥ್ಯ ಎಲ್ಲಿಂದ ಬಂದಿತು ಅಥವಾ ಯಾರು ಕೊಟ್ಟರು?!

ನಾಳೆ ನೋಡೋಣ....

ಧನ್ಯವಾದಗಳು
••••••••••••••••••••  ವಿಶ್ವಹೃದಯಾಶೀರ್ವಾದವಂ ಬಯಸಿ ಡಾ.ಮಲ್ಲಿಕಾರ್ಜುನ ಡಂಬಳ ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ

ಬ್ಲಾಗ್ ಲಿಂಕ್:
https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು