ಹೃದಯ ರಕ್ಷಕ ಸಿದ್ಧ ಸೂತ್ರಗಳು Heart protecting Agents

ಹೃದಯ ರಕ್ಷಕ ಸಿದ್ಧಸೂತ್ರ
 •••••••••••••••••••• 
ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ 
ಸಂಚಿಕೆ: 732
23.04.2023
••••••••••••••••••••
ನಿಮ್ಮ ಹೃದಯ ನಿರಂತರ ಸರಿಯಾಗಿ ಕೆಲಸ ಮಾಡಲು ಬೇಕಾದ ವಿಷಯಗಳ ಸಂಕ್ಷಿಪ್ತ ಗುಚ್ಚ ಇಲ್ಲಿದೆ.

1) ಪ್ರಾಣಧಾರಕ ಅವಯವ ಹೃದಯದ ರಕ್ಷಣೆ ಕೇವಲ ಕೊಲೆಸ್ಟರಾಲ್‌ ಬಿಡುವುದರಿಂದ ಆಗುವುದಿಲ್ಲ. 

2) ರಕ್ತ ಪರಿಚಲನೆಯಾಗಲು ರಕ್ತನಾಳಗಳು ಮೃದುವಾಗಿಯೂ ಮತ್ತು ಸಶಕ್ತವಾಗಿಯೂ ಇರಬೇಕು.

3) ರಕ್ತನಾಳಗಳು ಮೃದುವಾಗಿರಲು ಶುದ್ಧ ಗಾಣದ ಎಣ್ಣೆ, ಬೆಣ್ಣೆಯಿಂದ ತೆಗೆದ ಶುದ್ಧ ತುಪ್ಪ ಸೇವಿಸಿ.

4) ರಕ್ತನಾಳಗಳು ಸಶಕ್ತವಾಗಿರಲು ನಿತ್ಯವೂ ನಿಯಮಿತ ವ್ಯಾಯಾಮ ಬೇಕು, ಈಜುವಿಕೆ ಅತ್ಯುತ್ತಮ ವ್ಯಾಯಾಮ

5) ಕನಸಿನಲ್ಲಿ ಭಯಗೊಂಡರೂ, ಹೃದಯ ಜೋರಾಗಿ ಬಡಿದುಕೊಳ್ಳುತ್ತದೆ, ನಿಜದಲ್ಲಿ ಭಯಗೊಂಡರೆ ಅದೇ ಇನ್ನೂ ಒತ್ತಡದಿಂದ ಮತ್ತು ದೀರ್ಘ ಕಾಲ ಹೃದಯ ಬಡಿದುಕೊಳ್ಳುತ್ತದೆ. ಸಂತೋಷಕರ ಜೀವನ ಹೃದಯದ ಮಿತ್ರ.

6) ನೆನಪಿಡಿ, ಹೃದ್ರೋಗ ಒಂದು ಮೈಂಡ್‌ಗೇಮ್
ಹಾಗಾಗಿ, ನಿಮ್ಮ ತೀಕ್ಷ್ಣ ಬುದ್ಧಿಯನ್ನು ಬಳಸಿ ಕೆಲಸ ಮಾಡಿ, ವ್ಯವಹಾರ ಮಾಡಿ, ಅದನ್ನು ಮನೆವರೆಗೆ ಮನದ ವರೆಗೆ ಕೊಂಡೊಯ್ಯದಿರಿ.

7) ಗುದದ್ವಾರ ಹೃದಯಕ್ಕೆ ಬಲಕೊಡುವ ಟ್ರಿಗರ್, ಅದರ ಸಾಮರ್ಥ್ಯವನ್ನು ಕ್ಷೀಣಗೊಳಿಸುವ ಖಾರ, ಹುಳಿ, ಉಪ್ಪುಗಳನ್ನು ಅತ್ಯಂತ ಕಡಿಮೆ ಮತ್ತು ನಿಯಮಿತವಾಗಿ ಬಳಸಿ.

8) ಆಹಾರದ ಪ್ರಮಾಣ ಅಗತ್ಯಕ್ಕಿಂತ ಒಂದು ತುತ್ತು ಹೆಚ್ಚಾದರೂ ಗಮನಿಸಿ ಅಷ್ಟು ಒತ್ತಡ ಹೃದಯಕ್ಕೆ ಬೀಳುತ್ತಿದೆ.

9) ನಿದ್ರೆ ಮಾಡುವಾಗ, ಹೃದಯ ಕಡಿಮೆಕೆಲಸ ಮಾಡುತ್ತದೆ. ನಿದ್ದೆಯು ಹೃದಯಕ್ಕೆ ವಿಶ್ರಾಂತಿ ಕೊಡುವ ಮಹಾನ್ ಸಂಗತಿ, ನಿಮ್ಮ ಮನಸ್ಸು, ಶರೀರ ಉತ್ಸಾಹದಿಂದ ಇರುವಷ್ಟು ಪ್ರಮಾಣದ ನಿದ್ದೆ ಅತ್ಯಂತ ದಿವ್ಯ ಔಷಧ.
ನಿದ್ದೆಗೆ 7-8 ತಾಸು ಎಂಬ ಲೆಕ್ಕಬೇಡ, ಎದ್ದಾಗ ಮನಸ್ಸು ಉಲ್ಲಾಸದಿಂದ ಇದ್ದರೆ, ನಿದ್ದೆ ಸಂಪೂರ್ಣ ಆಗಿದೆ ಎಂದರ್ಥ.

ಕೊನೆಯದಾಗಿ,
10) ಜೀವನಕ್ಕೆ ನಿರ್ದಿಷ್ಟ ಗುರಿ ಇಟ್ಟುಕೊಂಡು, ಚಿತ್ತವನ್ನು ಕೇವಲ ಅದರತ್ತ ಇಟ್ಟು ಕೆಲಸಮಾಡಲೇಬಾರದು. ಇದು ಕಳಪೆ ಬದುಕನ್ನು, ಕನಸಿನ ಲೋಕವನ್ನು ಸೃಷ್ಟಿಸುತ್ತದೆ. ಸಧ್ಯಕ್ಕೆ ಪಾಲಿಗೆ ಬಂದ ಕೆಲಸವನ್ನು ಚುರುಕಾಗಿ, ಅಚ್ಚುಕಟ್ಟಾಗಿ, ಸಾವಿರ ಜನರಿಗೆ ಮಾದರಿಯಾಗಿ ಮಾಡಿದರೆ ಅದೇ ದೊಡ್ಡ ಗುರಿಯತ್ತ ಕೊಂಡೊಯ್ಯುತ್ತದೆ.

ಇಂಜಿನ್ ನಿರಂತರ ಕಾರ್ಯದಲ್ಲಿರಲು ಅನೇಕ ಸಂಗತಿಗಳು ಬೇಕಾಗುವಂತೆ ಹೃಯದದ ಇಂಜಿನ್‌ ನಿರಂತರ ಕೆಲಸ ಮಾಡಲು ಮೇಲಿನ ಸಂಗತಿಗಳು ಅತ್ಯಾವಶ್ಯಕ.

ಧನ್ಯವಾದಗಳು
••••••••••••••••••••  ವಿಶ್ವಹೃದಯಾಶೀರ್ವಾದವಂ ಬಯಸಿ ಡಾ.ಮಲ್ಲಿಕಾರ್ಜುನ ಡಂಬಳ ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ

ಬ್ಲಾಗ್ ಲಿಂಕ್:
https://hospitalfreelife.blogspot.com

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು