ಗಾಣದ ಎಣ್ಣೆ ಬೆಲೆ ಹೆಚ್ಚಲ್ಲ
🌱🌳🌱🌳🌱🌳🌱🌳
ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ
ಗಾಣದಿಂದ ತೆಗೆದ ನಿಜವಾದ ಖಾದ್ಯತೈಲದ ಬೆಲೆ ಹೆಚ್ಚಿಲ್ಲ ,
ಸಂಚಿಕೆ: 731
19.01.2023
••••••••••••••••••••
ಗಾಣದಿಂದ ತೆಗೆದ ನಿಜವಾದ ಖಾದ್ಯತೈಲದ ಬೆಲೆ ಹೆಚ್ಚಿಲ್ಲ ,
ಕಡಿಮೆ ಬೆಲೆಯ ತೈಲ ಸೇವಿಸಿದ ರೂಢಿಗೆ ಅದು ಹೆಚ್ಚಾದಂತೆ ತೋರುತ್ತದೆ.
30 ವರ್ಷಗಳ ಹಿಂದೆ ಇದ್ದ ಖಾದ್ಯ ತೈಲದ ಬೆಲೆ ಮೊನ್ನೆ ಮೊನ್ನೆವರೆಗೂ ಸ್ಥಿರವಾಗಿಯೇ ಇತ್ತು, ಇದು ಅಚ್ಚರಿ!!
ಎಲ್ಲಾ ದವಸ ಧಾನ್ಯಗಳ ಬೆಲೆ ಹೆಚ್ಚಿದಂತೆ, ಎಣ್ಣೆಯೂ ಹೆಚ್ಚಬೇಕಾಗಿತ್ತು, ಅದರ ಬದಲು, ಕಾಣದ ಕೈಗಳ ಧನದಾಹದ ಕಾರಣ, ಕೊಲೆಸ್ಟರಾಲ್ ಭೂತವನ್ನು ತುಂಬಿ, ಪೆಟ್ರೋಲಿಯಂ ಉತ್ಪನ್ನಗಳನ್ನು ಬೆರೆಸಿ ಝೀರೋ ಕೊಲೆಸ್ಟರಾಲ್ ಹೆಸರಿನಿಂದ ತಿನ್ನಿಸಲು ಯೋಚಿಸಿದಾಗ......
• ಕಡಿಮೆ ಬೆಲೆ
• ಆರೋಗ್ಯಕ್ಕೆ ಒಳ್ಳೆಯದೆಂದು ಹೇಳುತ್ತಾರೆ
• ಎಣ್ಣೆ ತಿಂಡಿ ರುಚಿಕರ
• ಹೆಚ್ಚು ತಿಂದರೂ ಲೈಟಾಗಿರುತ್ತೆ ಅಂತಾರೆ
• ದೊಡ್ಡವರು, ವೈದ್ಯರು ಜಾಹೀರಾತಿನಲ್ಲಿ ಒಳ್ಳೆಯದೆಂದು ಹೇಳ್ತಾರೆ
•
•
ಇನ್ನು ಯಾರು ಏನು ಹೇಳಿದರೂ ಇದಕ್ಕಿಂತ ಉತ್ತಮಸಲಹೆ ಉಂಟೇ ಎಂದು ನಾವೂ ತಿಂದದ್ದೇ ತಿಂದದ್ದು
ಮೂವತ್ತು ವರ್ಷಗಳಿಂದೀಚೆ ಹೃದ್ರೋಗಗಳು ಹೆಚ್ಚಿದ್ದೇ ಹೆಚ್ಚಿದ್ದು.
ಸುಮ್ಮನೇ ಇದ್ದಿದ್ದರೆ ಆಗಿನ ಸಹಜ ಗಾಣದ ಎಣ್ಣೆ, ನಿಧಾನವಾಗಿ 10, 20ರೂಪಾಯಿ ಹೆಚ್ಚುತ್ತಾ ಇಂದು 300-350/- ಆಸುಪಾಸಿನಲ್ಲಿ ಇರುತ್ತಿತ್ತು ಮತ್ತು ಮನುಷ್ಯನ ಹೃದಯ ಚನ್ನಾಗಿಯೂ ಇರುತ್ತಿತ್ತು....
ಆದರೆ,
ಈಗ ನಮ್ಮ ಮನಸ್ಸಿಗೆ ಅನಿಸುತ್ತದೆ ಶುದ್ಧ ಗಾಣದ ಎಣ್ಣೆ ದುಬಾರಿ ಎಂದು...
ವಾಸ್ತವದಲ್ಲಿ ಅದು ದುಬಾರಿ ಅಲ್ಲ, ಆರೋಗ್ಯಕಾರಿ
ಆದರೆ,
ಎಣ್ಣೆ ಪದಾರ್ಥಗಳು ನಿತ್ಯ ಸೇವನೆ ಸರಿಯಲ್ಲ, ವ್ಯಾಯಾಮ ಅತ್ಯಗತ್ಯ ಮತ್ತು ವಗ್ಗರಣೆ ಕಲಸಿದ ಚಿತ್ರಾನ್ನ, ಪುಳಿಯೊಗರೆ, ಅವಲಕ್ಕಿ, ಮಂಡಕ್ಕಿ(ಚುರುಮುರಿ) ರೂಪಗಳಲ್ಲಿ ತಿಂದರೆ, ಗಾಣದೆಣ್ಣೆಯೂ ಹಾನಿ ತರುತ್ತದೆ.
ಪಲಾವು, ಪಲ್ಯ, ಸಂಬಾರುಗಳಲ್ಲಿ ಎಣ್ಣೆ ಸ್ವಲ್ಪ ಹೆಚ್ಚಿದ್ದರೂ ಆರೋಗ್ಯಕರವಾಗಿರುತ್ತದೆ.
ಆಹಾರದ ಶಕ್ತಿಗೆ ಅನುಗುಣವಾಗಿ ವ್ಯಾಯಾಮ ಮಾಡಿ; ಆರೋಗ್ಯದಿಂದ ಇರಿ
ಧನ್ಯವಾದಗಳು
ವಿಶ್ವಹೃದಯಾಶೀರ್ವಾದವಂ ಬಯಸಿ
ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ