ಜಿಡ್ಡಿಲ್ಲದ ಎಣ್ಣೆಯಿಂದ ಹೃದಯಸ್ಥಂಬನ!!!!

🌱🌳🌱🌳🌱🌳🌱🌳
ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ 
ಸಂಚಿಕೆ: 730
18.01.2023 
•••••••••••••••••••• 

ಜಿಡ್ಡಿಲ್ಲದ ಎಣ್ಣೆಯಿಂದ ಇಂಜಿನ್ ಚಲನೆ ನಿಲ್ಲುವುದಾದರೆ, ಜಿಡ್ಡಿಲ್ಲದ ಖಾದ್ಯತೈಲದಿಂದ ಹೃದಯದ ಮಾಂಸಖಂಡಗಳ ಚಲನೆ ಸರಾಗವಾಗುತ್ತದೆ ಎಂದು ನಂಬುವುದು ಆಶ್ಚರ್ಯ!!


ಇಂದಿನ ಹೆಚ್ಚಿನ ಹೃದಯಾಘಾತಗಳಿಗೆ ಕಾರಣ, ಕೊಲೆಸ್ಟರಾಲ್ ಇಲ್ಲದ ಎಣ್ಣೆ ಸೇವೆನೆ ಮತ್ತು ಮಾಧುರ್ಯವಿಲ್ಲದ ಆಹಾರ ಸೇವನೆ....

ಕೇವಲ ಪ್ರೋಟೀನ್‌ಗಳು ಹೃದಯದ ಮಾಂಸ ಖಂಡಗಳನ್ನು ಗಡುಸುಗೊಳಿಸುತ್ತವೆ. ಗಡುಸಾದ ಮಾಂಸಖಂಡಗಳು ಹಿಗ್ಗುವಿಕೆ ಕುಗ್ಗುವಿಕೆಯನ್ನು ಒಂದಷ್ಟು ಚೌಕಟ್ಟಿನಲ್ಲಿ ಮಾತ್ರ ಬಲವಾಗಿ ಮಾಡಬಲ್ಲವು, ವೇಗವಾಗಿ ಅಲ್ಲ!. ಅಗತ್ಯಕ್ಕೆ ತಕ್ಕ ಹಿಗ್ಗುವಿಕೆ ಮತ್ತು ವೇಗದಿಂದ ಹೃದಯದ ಮಾಂಸಖಂಡಗಳ ಚಲಿಸಿದರೆ ಮಾತ್ರ ಬಿರುಸಿನ ಕೆಲಸಗಳ ಸಂದರ್ಭದಲ್ಲಿ ಕೆಲಸ ಸಾಧ್ಯ.
ಹಾಗಾಗಿ, ಮಾಂಸಖಂಡಗಳನ್ನು ದೊಡ್ಡದಾಗಿಸುವ, ಗಟ್ಟಿಗೊಳಿಸುವ ಕಾರ್ಯವಷ್ಟೇ ದೊಡ್ಡ ಕೆಲಸ ಎಂದು ಭಾವಿಸಿ ಜಿಡ್ಡಿಲ್ಲದ ಎಣ್ಣೆ ಮತ್ತು ಕೇವಲ ಪ್ರೋಟೀನ್ ಸೇವಿಸಿದವರ ಜೀವನವು ಪ್ರತ್ಯಕ್ಷವಾಗಿ ಏನಾಗುತ್ತಿದೆ ಎಂದು ನೋಡಿ, ಅವರು ಜೋರಾಗಿ ಕೆಲಸ ಮಾಡಲು ಹೋದಾಗ ಹೃದಯಸ್ಥಂಬನ ಆಗುತ್ತಿಲ್ಲವೇ? ಸಣ್ಣ ಮಧ್ಯಮ‌ವಯದಲ್ಲೇ ಸಾಯುತ್ತಿಲ್ಲವೇ?

ಈಗಲೂ ಜಿಡ್ಡು ರಹಿತ ಝೀರೋ ಕೊಲೆಸ್ಟರಾಲ್‌ ಬಳಸಬೇಕೇ?!!!

ಇದು ಎಲ್ಲರಿಗೂ ತಿಳಿಯುವ ಸಮಾನ್ಯ ಜ್ಞಾನ, ಆದರೆ ಔಷಧವೇ ಜೀವನ ಎಂದು ಸಂಶೋಧನೆಗಳ ಹೆಸರಿನಲ್ಲಿ ಜನರ ಹಣ ದೋಚುವ ದೃಷ್ಟಿಯ ಜನರ ಜಾಣ ಮರೆವು ಮನುಷ್ಯರ ಪ್ರಾಣ ತೆಗೆಯುತ್ತಿದೆ!!!
ಹೇಳಿ ನಾವು ಬಲಿಯಾಗಬೇಕೇ? 

ಶುದ್ಧ ಗಾಣದ ಎಣ್ಣೆ ಬಳಸಿ ಮತ್ತು ತಪ್ಪದೇ ಶಾರೀರಿಕ ಶ್ರಮ ಮಾಡಿ, ಹೃದಯವನ್ನು ಆರೋಗ್ಯದಿಂದ ಇಟ್ಟುಕೊಳ್ಳಿ

 ಧನ್ಯವಾದಗಳು 


ವಿಶ್ವಹೃದಯಾಶೀರ್ವಾದವಂ ಬಯಸಿ ಡಾ.ಮಲ್ಲಿಕಾರ್ಜುನ ಡಂಬಳ ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು