ಎಚ್ಚರದಿಂದ ಬಳಸಿ ನಿಮ್ಮ ಮೇಧಾ(ಬುದ್ಧಿವಂತಿಕೆ)

ನಮಗೆ ದೊರೆತ ಬುದ್ಧಿವಂತಿಕೆಯು ನಮ್ಮ ಮನುಕುಲಕ್ಕೆ ಮಾರಕವಾಗುವುದಾದರೆ ಅದರಿಂದ ಲಾಭವೇನು?

 •••••••••••••••••••• 
ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ 
ಸಂಚಿಕೆ: 729
16.01.2023

ಮೇದಸ್ಸು ಎಂದರೆ ಕೊಬ್ಬು ಎಂದು ಎಲ್ಲರಿಗೂ ತಿಳಿದಿದೆ, ಮೇಧಾ ಎಂದರೆ ಬುದ್ಧಿವಂತೆಕೆ ಎಂದೂ ಸಹ ತಿಳಿದಿದೆ. ಆದರೆ, ಮೇದಾ ಮತ್ತು ಮೇಧಾಕ್ಕೆ ಇರುವ ಸಂಬಂಧವನ್ನು ಆಯುರ್ವೇದದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. 
ಮಾನವನ ಶರೀರ ಮಾತ್ರ ಈ ವಿಶೇಷ ಗುಣವನ್ನು ಹೊಂದಿದೆ, ಪ್ರಾಣಿ ಶರೀರ ತನ್ನ ಕೊಬ್ಬನ್ನು ಬಳಸಿಕೊಂಡು ಗರಿಷ್ಠ ಶಾರೀರಿಕ ಶ್ರಮವನ್ನು ಮಾಡುತ್ತದೆ. ಈ ಪ್ರಕೃತಿಯು ಮಾನವನಿಗೆ ಬಹುದೊಡ್ಡ ವರವನ್ನು ಕೊಟ್ಟಿದೆ, ಅದೇನೆಂದರೆ- ಸಾಮಾನ್ಯ ಕೊಬ್ಬನ್ನು ಸಾರ ಕೊಬ್ಬನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ನಮ್ಮ ಶರೀರ ಹೊಂದಿದೆ ಮತ್ತು ಈ ಸಾರ ಕೊಬ್ಬಿನಿಂದಲೇ 'ಮೆದುಳು' ಉಂಟಾಗಿದೆ. ಇದನ್ನು ಕಂಡುಕೊಂಡ ನಮ್ಮ ಋಷಿವಿಜ್ಞಾನಿಗಳು ಮೆದುಳಿನ ಕ್ರಿಯಾತ್ಮಕ ವಿಸ್ಮಯವನ್ನು 'ಮೇಧಾ' ಎಂದು ಕರೆದರು.
ಈ ಮೇಧಾ ಎಂಬ ಮಹಾ ಸಾಮರ್ಥ್ಯವನ್ನು ಬಳಸಿಕೊಂಡ ಕಾರಣದಿಂದಲೇ, ಮಾನವ ಈ ವಿಶ್ವದಲ್ಲಿ ವಿಸ್ಮಯಗಳನ್ನು ಸೃಷ್ಟಿಸುತ್ತಾ ವಿಕಾಸದಲ್ಲಿ ಮುಂದುವರಿದು, ಪ್ರಕೃತಿಯ ಎಲ್ಲಾ ಜೀವಿಗಳ ಮೇಲೆ ಹಿಡಿತ ಹೊಂದಿದ್ದಾನೆ. ಪ್ರಕೃತಿಯ ಈ ಮಾತೃಗುಣವನ್ನು ಮರೆತು, ತನ್ನಂತಹುದೇ ಇನ್ನೊಂದು ಜೀವಿಗೇ ಮೋಸದ ಯೋಚನೆ ಮಾಡುತ್ತಿರುವುದು, ಮೇಧಾಶಕ್ತಿಯ ಸ್ಪಷ್ಟ ದುರ್ಬಳಕೆ.
ಪ್ರಕೃತಿ ಆಕೆ 'ಮಾತೆ' ನಮ್ಮ ನಿಕೃಷ್ಠ ಯೋಚನೆ ಆಕೆಯನ್ನು ದಾಸಿಯಂತೆ ನಡೆಸಿಕೊಳ್ಳುತ್ತಿದೆ!! ಇದು ಮಹಾ ದೌರ್ಭಾಗ್ಯ.
ಮಣ್ಣನ್ನು, ನೀರನ್ನು, ವಾಯುವನ್ನು ಮುಂದಾಲೋಚನೆ ರಹಿತವಾಗಿ ಕೇವಲ ಭೌತಿಕ ಸುಖಕ್ಕೆ ಬಳಸಿಕೊಂಡು, ವಿಷಮಯವಾಗಿಸಿದ್ದಾನೆ. 
ಒಂದು ಅಂದಾಜಿನಂತೆ, ನಾವು ಸೃಷ್ಟಿಸಿರುವ ಈ ಅವಾಂತರವನ್ನು ಪ್ರಕೃತಿ ಸರಿಪಡಿಸಿಕೊಳ್ಳಲು ಮಾನವ ಈ ಭೂಮಿಯಿಂದ ಮಾಯವಾಗಿ ಕನಿಷ್ಠ 25 ಮತ್ತು ಗರಿಷ್ಠ 1000 ವರ್ಷ ಬೇಕಾಗುತ್ತದೆ!!!

ಪರಿಣಾಮ ಏನು?
ಪ್ರತಿ ಜೀವಿಯೂ ತನ್ನ DNA (ಡಿ.ಎನ್.ಎ) ಸ್ಮೃತಿಯ ಆಧಾರದಲ್ಲಿ ಕಾರ್ಯ ಮಾಡುತ್ತದೆ, ಆ ಕಾರ್ಯದ ಆಧಾರದಲ್ಲೇ ಅದರ ಜೀವನ ಇರುತ್ತದೆ, ಇದನ್ನು ತಪ್ಪಿಸುವುದು ಸುಲಭಸಾಧ್ಯವಲ್ಲ. DNA ಸ್ಮೃತಿ ಅಳಿಸುವುದು ಅಥವಾ ಪುನಃ ಹೊಸರೀತಿಯಲ್ಲಿ ಬರೆದುಕೊಳ್ಳುವುದರ ಸ್ವಸಾಮರ್ಥ್ಯವನ್ನು ಪ್ರಕೃತಿ ನಮಗೆ 'ಮೇಧಾ' ಎಂಬ ಬುದ್ಧಿಯಿಂದ ಕೊಡಮಾಡಿದೆ. 
ಆದರೆ, ಮಾನವ ತನ್ನ ಹಣೆಬರಹವನ್ನು ಈಗ ಹೇಗೆ ಬರೆದುಕೊಳ್ಳುತ್ತಿದ್ದಾನೆ?! ಈ DNA ರಚನೆಯನ್ನು ಯಾರೋ ಮೇಲೆ ಕುಳಿತು ಬರೆದ ದೇವರಲ್ಲ ಅದು "ನಾವೇ" 

ಪ್ರತಿ ಜೀವಿಗೂ ಮರುಜನ್ಮ ಎನ್ನುವುದು ಇದೆ, ಕರ್ಮಫಲಗಳನ್ನೇ ಸಂಗವನ್ನಾಗಿ ಉಣ್ಣುವುದು ಎಲ್ಲ ಜೀವಿಗೂ ಅನಿವಾರ್ಯ. 
ಇಂದು ಹೀಗಿರಲು, ನೆನ್ನೆಯ ಕೆಲಸಗಳೇ ಕಾರಣವಾದರೆ, ನಮ್ಮ ನಾಳೆ ಚನ್ನಾಗಿರಲು ಇಂದಿನ ಕೆಲಸಗಳೇ ಕಾರಣ ಅಲ್ಲವೇ?

ಪರಿಹಾರ ಏನು?:
ಪ್ರಕೃತಿಯನ್ನು ಮಾತೆ ಎಂದು ಭಾವಿಸಿ ಕೆಲಸ ಮಾಡಿದರೆ ಆಕೆ ನಮ್ಮೆಲ್ಲಾ ಆಸೆಗಳನ್ನೂ ಪೂರೈಸುತ್ತಾಳೆ, ಹರಸುತ್ತಾಳೆ.
ಮಣ್ಣಿಗೆ ವಿಷ, ತನ್ನುವ ಗಿಡಕ್ಕೆ ವಿಷ, ದವಸ ಧಾನ್ಯ-ಹಣ್ಣುಗಳಿಗೆ ವಿಷ ಸುರಿದುಕೊಂಡು ಯಾರ ತಟ್ಟೆಗೆ ಹಾಕಿಕೊಳ್ಳುತ್ತಿದ್ದೇವೆ?! 
ಮಣ್ಣು-ನೀರು-ಗಾಳಿನ್ನು ಸಹಜವಾಗಿ ಸದ್ಬಳಕೆ ಮಾಡಿದರೆ ಮನುಷ್ಯ ತಾನೂ ಕ್ಷೇಮ ಮತ್ತು ತನ್ನ ಕುಲವೂ ಕ್ಷೇಮ.
ಧನ್ಯವಾದಗಳು

 •••••••••••••••••••• 
 ವಿಶ್ವಹೃದಯಾಶೀರ್ವಾದವಂ ಬಯಸಿ ಡಾ.ಮಲ್ಲಿಕಾರ್ಜುನ ಡಂಬಳ ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು